ಡಿಜಿಟಲ್ ಶಿಕ್ಷಣ ಪರಿಕರಗಳ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳವ ಪ್ರಯತ್ನದಲ್ಲಿ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಹೊಸ ಯೋಜನೆಯಂದನ್ನು ರೂಪಿಸಿದ್ದು, ಶೈಶ್ಷಣಿಕ ವಿಷಯಕ್ಕಾಕಿ ತನ್ನ ಸೈಟ್ನ ಸ್ಟ್ರಿಪ್ಡ್-ಡೌನ್ ಆವೃತ್ತಿಯನ್ನು ಶಾಲೆಗಳು ಮತ್ತು ಕಾಲೇಜುಗಳಿಗೆ ಅನುಗುಣವಾಗಿ ನೀಡುವುದಾಗಿ ಘೋಷಿಸಿದೆ.
ಯುಟ್ಯೂಬ್, ತನ್ನ ಅಧಿಕೃತ ಬ್ಲಾಗ್ನಲ್ಲಿ, ʼಶೈಕ್ಷಣಿಕ ಪರಿಸರದಲ್ಲಿ ಯುಟ್ಯೂಬ್ ಅನುಭವವನ್ನು ಸುಧಾರಿಸಲು ನಾವು ಶಿಕ್ಷಣಕ್ಕಾಗಿ ಯುಟ್ಯೂಬ್ ಪ್ಲೇಯರ್ ಅನ್ನು ಪ್ರಾರಂಭಿಸಿದ್ದೇವೆ ಎಂದು ಹೇಳೆದೆ. ಯುಟ್ಯೂಬ್ ಪ್ಲೇಯರ್ ಫಾರ್ ಎಜುಕೇಷನ್ ಮತ್ತು ಕೋರ್ಸ್ಗಳನ್ನು ಪರಿಚಯಿಸುತ್ತಿದೆ. ಇದು ವಿಡಿಯೋ ರಚನೆಕಾರರರಿಗೆ ಆನ್ಲೈನ್ ತರಗತಿಗಳನ್ನು ಶಲ್ಕ ಅಥವಾ ಉಚಿತವಾಗಿ ನೀಡಲು ಅವಕಾಶ ನೀಡುವ ವೈಶಿಷ್ಟ್ಯವಾಗಿದೆ.