ಫೇಸ್‍ಬುಕ್‍, ವಾಟ್ಸಪ್‍, ಇನ್‍ಸ್ಟಾಗ್ರಾಂ ಡೌನ್‍!

ಹೊಸದಿಲ್ಲಿ: ಜನಪ್ರಿಯ ಸೋಷಿಯಲ್‍ ಮೀಡಿಯಾಗಳಾದ ವಾಟ್ಸಪ್‍, ಫೇಸ್‍ಬುಕ್‍, ಇನ್‍ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್‍ ಮೆಸೆಂಜರ್‌ಗಳು ಸೋಮವಾರ ರಾತ್ರಿ ವೇಳೆ ಸ್ಥಗಿತಗೊಂಡಿವೆ.

ಆ್ಯಪ್‌ಗಳ ಬಳಕೆಯಲ್ಲಿ ಎದುರಿಸುತ್ತಿರುವ ತೊಂದರೆಯ ಬಗ್ಗೆ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಫೇಸ್‌ಬುಕ್‌ `ಸೇವೆಯಲ್ಲಿ ವ್ಯತ್ಯಯವಾಗಿರುವುದಕ್ಕೆ ಬಳಕೆದಾರರಲ್ಲಿ ಕ್ಷಮೆಯಿರಲಿ. ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರವೇ ಬಗೆಹರಿಸಲಾಗುವುದು’ ಎಂದು ತಿಳಿಸಿದೆ.

ʻಜನಪ್ರಿಯ ಸೋಷಿಯಲ್‌ ನೆಟ್‌ವರ್ಕಿಂಗ್‌ ಮತ್ತು ಸಂವಹನ ವೇದಿಕೆಗಳನ್ನು ಪ್ರವೇಶಿಸಲಾಗುತ್ತಿಲ್ಲ’ ಎಂದು ಬಳಕೆದಾರರು ಟ್ವಿಟರ್‍ನಲ್ಲಿ ಸಮಸ್ಯೆ ಕುರಿತು ಚರ್ಚಿಸುತ್ತಿದ್ದಾರೆ.

20,000 ಮಂದಿ ಫೇಸ್‍ಬುಕ್‍ ಮತ್ತು ಇನ್‍ಸ್ಟಾಗ್ರಾಂನಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಿರುವುದು ಪೋರ್ಟಲ್‍ನಲ್ಲಿ ದಾಖಲಾಗಿದೆ.

ಅಲ್ಲದೇ, ವಾಟ್ಸಪ್‍ ಬಳಕೆದಾರರಲ್ಲಿ 14,000 ಮಂದಿ ಹಾಗೂ ಮೆಸೆಂಜರ್ ಬಳಸುತ್ತಿರುವವರಲ್ಲಿ 3,000 ಮಂದಿ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

× Chat with us