ಜಮ್ಮು- ಕಾಶ್ಮೀರದಲ್ಲಿ ಕಂಪಿಸಿದ ಭೂಮಿ

ಜಮ್ಮು-ಕಾಶ್ಮೀರದಲ್ಲಿ ಇಂದು (ಶುಕ್ರವಾರ ಜೂನ್ 17 ) ಮಧ್ಯಾಹ್ನ 5.2 ರಷ್ಟು ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ.

ಸರಿಸುಮಾರು ಮಧ್ಯಾಹ್ನ 2.50 ರವೇಳೆಗೆ ಜಮ್ಮು ಕಾಶ್ಮೀರ ಪಾಕಿಸ್ತಾನ ಮತ್ತು ಅಘ್ಪಾನಿಸ್ತಾನದಲ್ಲಿ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, ಪಶ್ಚಿಮ ಅಪಘಾನಿಸ್ತಾನದಲ್ಲಿ ಭೂಕಂಪನ ಕೇಂದ್ರಿತವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದಿಂದ 230 ಕಿಲೋಮೀಟರ್ ದೂರದಲ್ಲಿ ಕಂಪನದ ತೀವ್ರತೆ ಹೆಚ್ಚಾಗಿ ಕಂಡು ಬಂದಿದ್ದು ಅಲ್ಲಿಯ ಜನರು ಭಯದಿಂದ ಮನೆಯಿಂದ ಹೊರಗೆ ಬಂದಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.