ಇಸ್ರೋದಿಂದ ಸಂವಹನ ಉಪಗ್ರಹ GSAT-24 ಉಡಾವಣೆ

ಬೆಂಗಳೂರು : GSAT-24 DTH ಅಪ್ಲಿಕೇಶನ್ ಅಗತ್ಯಗಳನ್ನು ಪೂರೈಸಲು ಪ್ಯಾನ್ – ಇಂಡಿಯಾ ವ್ಯಾಪ್ತಿಯೊಂದಿಗೆ 4,180 ಕೆಜಿ ತೂಕದ 24-Ku ಬ್ಯಾಂಡ್ ಸಂವಹನ ಉಪಗ್ರಹವನ್ನು ಫ್ರೆಂಚ್​ ಗಯಾನದ ಕೌರೌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.

ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಗಾಗಿ ಇಸ್ರೋ ನಿರ್ಮಿಸಿದ ಜಿಸ್ಯಾಟ್ -24 ಉಪಗ್ರಹ ಇದಾಗಿದೆ.

GSAT-24 DTH ಅಪ್ಲಿಕೇಶನ್ ಅಗತ್ಯಗಳನ್ನು ಪೂರೈಸಲು ಪ್ಯಾನ್ – ಇಂಡಿಯಾ ವ್ಯಾಪ್ತಿಯೊಂದಿಗೆ 4,180 ಕೆಜಿ ತೂಕದ 24-Ku ಬ್ಯಾಂಡ್ ಸಂವಹನ ಉಪಗ್ರಹವಾಗಿದೆ. ಕೆಲ ಸುಧಾರಣೆಗಳ ಬಳಿಕ ಎನ್​​ಎಸ್​​​ಐಎಲ್​ ಕೈಗೊಂಡಿರುವ ಸಂವಹನ ಉಪಗ್ರಹ ಉಡಾವಣೆ ಮಾಡಲಾಗಿದ್ದು, ಬಾಹ್ಯಾಕಾಶ ಇಲಾಖೆಯ ಅಡಿ ಭಾರತ ಸರ್ಕಾರದ NSIL ಈ ಉಪಗ್ರಹವರನ್ನು ಟಾಟಾ ಪ್ಲೇಗೆ ಗುತ್ತಿಗೆ ನೀಡಿದೆ.