ನವದೆಹಲಿ : ಆಕಾಶ್ ಏರ್ ವಿಮಾನಯಾನ ಸಂಸ್ಥೆಯು ವಿಮಾನದಲ್ಲಿ ಪ್ರಯಾಣಿಸುವವರಿಗೆ ಗುಡ್ ನ್ಯೂಸ್ ವೊoದನ್ನು ನೀಡಿದೆ.
ನವೆಂಬರ್ 1 ನೇ ತಾರೀಖಿನಿಂದ ಪ್ರಯಾಣಿಕರು ವಿಮಾನದಲ್ಲಿ ತಮ್ಮ ಸಾಕು ಪ್ರಾಣಿಗಳಾದ ಬೆಕ್ಕು ಮತ್ತು ನಾಯಿಗಳನ್ನು ಜೊತೆಗೆ ಕರೆದುಯಲು ಅವಕಾಶವನ್ನು ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.
ಪ್ರಯಾಣಿಕರು ತಮ್ಮ ಕ್ಯಾಬಿನ್ ನಲ್ಲಿ ಏಳು ಕೆಜಿ ತೂಕದ ಸಾಕು ಪ್ರಾಣಿಗಳನ್ನು ಮಾತ್ರ ಕರೆದುಯಲು ಅನುಮತಿ ನೀಡಲಾಗಿದೆ ಇದಕ್ಕಿಂತ ಹೆಚ್ಚಿನ ತೂಕ ಹೊಂದಿರುವ ಪ್ರಾಣಿಗಳಿಗೆ ಕಾರ್ಗೋ ದಲ್ಲಿ ಅನುಮತಿಸಬಹುದು ಎಂದು ತಿಳಿಸಿದೆ.