ಮಾನವನ ದೇಹಕ್ಕೆ ಹಂದಿಯ ಕಿಡ್ನಿ ಜೋಡಣೆ; ಅಮೆರಿಕ ವೈದ್ಯರು ಸಕ್ಸಸ್‌!

ವಾಷಿಂಗ್ಟನ್: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಏನಾದರೂ ಒಂದು ಆವಿಷ್ಕಾರ ನಡೆಯುತ್ತಿರುತ್ತದೆ. ಎಷ್ಟೋ ವಿಷಯಗಳು ಜನರಿಗೆ ಪವಾಡ ಸದೃಶ ಎನಿಸಬಹುದು. ಅದಕ್ಕೆ ನಿದರ್ಶನ ಎಂಬಂತೆ, ವಿಶ್ವದ ಜನತೆ ಬೆರಗಾಗಿ ನೋಡುವಂತಹ ಕಾರ್ಯವೊಂದನ್ನು ಅಮೆರಿಕ ವೈದ್ಯರ ತಂಡವೊಂದು ಮಾಡಿದೆ.

ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಹಂದಿಯ ಕಿಡ್ನಿಯನ್ನು ವ್ಯಕ್ತಿಯೊಬ್ಬರಿಗೆ ತಾತ್ಕಾಲಿಕವಾಗಿ ಜೋಡಿಸುವಲ್ಲಿ ಯಶಸ್ವಿಯಾಗಿದೆ. ಸೆ.25ರಂದು ಈ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಮಾನವನ ದೇಹದಲ್ಲಿ ಕಿಡ್ನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಿದುಳು ನಿಷ್ಕ್ರಿಯಗೊಂಡು ವೆಂಟಿಲೇಟರ್‌ನಲ್ಲಿದ್ದ ವ್ಯಕ್ತಿಗೆ ಹಂದಿಯ ಕಿಡ್ನಿಯನ್ನು ಜೋಡಿಸಲಾಗಿದೆ. ಎರಡು ದಿನಗಳ ಈ ಪ್ರಯೋಗಕ್ಕಾಗಿ ವ್ಯಕ್ತಿಯ ಕುಟುಂಬದವರ ಅನುಮತಿಯನ್ನು ಪಡೆಯಲಾಗಿತ್ತು.

ಅಂಗವು ಕ್ರಿಯೇಟಿನೈನ್ ಅಣುವಿನ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಇದು ಮೂತ್ರಪಿಂಡದ ಆರೋಗ್ಯದ ಪ್ರಮುಖ ಸೂಚಕವಾಗಿದ್ದು, ಕಸಿ ಮಾಡುವ ಮೊದಲು ರೋಗಿಯಲ್ಲಿ ಹೆಚ್ಚಾಗಿದೆ.

ʻಮಾನವನ ದೇಹದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಮೂರು ವಾರ, ಮೂರು ತಿಂಗಳು ಅಥವಾ ಮೂರು ವರ್ಷದಲ್ಲಿ ಏನಾಗಬಹುದು ಎಂಬುದನ್ನು ಗಮನಿಸಬೇಕುʼ ಎಂದು ಮಾಂಟ್ಗೊಮೆರಿ ತಿಳಿಸಿದೆ.

× Chat with us