ವಿಜ್ಞಾನ ತಂತ್ರಜ್ಞಾನ

10 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ Microsoft

ವಾಷಿಂಗ್ಟನ್​: ಆರ್ಥಿಕ ಹಿಂಜರಿತದಿಂದ ಅಮೆರಿಕದ ದೊಡ್ಡ ದೊಡ್ಡ ಟೆಕ್​ ಕಂಪನಿಗಳಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆದಿದ್ದು, ದಿನವೊಂದಕ್ಕೆ 1600 ಮಂದಿ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪಟ್ಟಿಗೆ ಇದೀಗ ಮೈಕ್ರೋಸಾಫ್ಟ್​ ಕೂಡ ಸೇರಿಕೊಂಡಿದೆ. ಟೆಕ್​ ದೈತ್ಯ ಸಂಸ್ಥೆ​ಯು ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು​ ವರದಿ ಮಾಡಿವೆ. ಮೈಕ್ರೋಸಾಫ್ಟ್​​ ತಮ್ಮ ಸಂಸ್ಥೆಯಲ್ಲಿ ಸರಿಸುಮಾರು ಶೇ 5ರಷ್ಟು ಅಥವಾ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಇಂಜಿನಿಯರಿಂಗ್​ ವಿಭಾಗದಲ್ಲಿ ಬುಧವಾರ ಸಾವಿರಾರು ಜನರು ಕೆಲಸ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ನಡೆಯುತ್ತಿರುವ ಹೊಸ ಉದ್ಯೋಗ ವಜಾ ಪ್ರಕರಣವಿದು. ಈಗಾಗಲೇ ಅಮೆಜಾನ್​, ಮೆಟಾದಂತಹ ಸಂಸ್ಥೆಗಳು ಬೇಡಿಕೆ ಕುಗ್ಗುವಿಕೆ ಮತ್ತು ಜಾಗತಿಕ ಆರ್ಥಿಕತೆ ಕುಸಿತದಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಅನಿವಾರ್ಯವಾಗಿದೆ ಎಂದು ಪ್ರಕಟಿಸಿ, ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದವು.

ಮಾರುಕಟ್ಟೆ ಕುಸಿತ: ಜೂನ್​ 30ರ ವರದಿ ಅನುಸಾರ, ಮೈಕ್ರೋಸಾಫ್ಟ್​ ಸಂಸ್ಥೆಯಲ್ಲಿ 221,000 ಮಂದಿ ಪೂರ್ಣ ಪ್ರಮಾಣದ ಉದ್ಯೋಗಿಗಳಿದ್ದಾರೆ. ಇದರಲ್ಲಿ ಅಮೆರಿಕದಲ್ಲಿ 122,000 ಮಂದಿ ಕಾರ್ಯ ನಿರ್ವಹಿಸುತ್ತಿದ್ದರೆ, 99,000 ಮಂದಿ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಿಗಳಾಗಿದ್ದಾರೆ. ಮೈಕ್ರೋಸಾಫ್ಟ್​​ ತಮ್ಮ ಕ್ಲೌಡ್​ ಯೂನಿಟ್​ ಅಜುರ್​ ಬೆಳವಣಿಗೆ ನಿರ್ವಹಣೆ ಒತ್ತಡದಲ್ಲಿ ಸಿಲುಕಿದೆ. ಅಲ್ಲದೇ, ಮಾರುಕಟ್ಟೆಯ ಕ್ವಾರ್ಟರ್​ನಲ್ಲಿ ಕುಸಿತದ ನಂತರ ವಿಂಡೋಸ್​ ಮತ್ತು ಸಾಧನಗಳ ಮಾರಾಟ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯವಾಗಿದೆ ಎನ್ನಲಾಗಿದೆ.

andolanait

Share
Published by
andolanait

Recent Posts

ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ಮಗಳು !

ತುಮಕೂರು : ಜ್ಯೋತಿಷಿಯ ಮಾತು ನಂಬಿ ಮಗಳು ತಾಯಿಯನ್ನೇ ಕೊಲೆ‌ ಮಾಡಿರುವ ಘಟನೆ ತುಮಕೂರು ತಾಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ. ಪುಷ್ಪಲತಾ…

16 mins ago

ಆರೋಗ್ಯ ಇಲಾಖೆಯ ಅಧಿಕಾರಿ ಅಬಕಾರಿ ಡಿಸಿಯಾಗಿ ನಿಯೋಜನೆ : ನಿಯಮ ಉಲ್ಲಂಘನೆ ಆರೋಪ

ಮಂಡ್ಯ : ಇತ್ತೀಚೆಗೆ ಹಲವು ಇಲಾಖಾ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಸರ್ಕಾರ ಆದೇಶ ಹೊರಡಿಸಿದ್ದು, ಅದರಲ್ಲಿ ಮಂಡ್ಯ ಜಿಲ್ಲಾ ಆರೋಗ್ಯ…

1 hour ago

ಸಿದ್ದರಾಮಯ್ಯ ಅವರೇ ಐದು ವರ್ಷ ಮುಂದುವರಿಯುವ ಆಸೆ ಇದೆ : ಶಾಸಕ ಕೆ.ಹರೀಶ್‌ ಗೌಡ

ಮೈಸೂರು : ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವ ಆಸೆ ಇದೆ. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ…

2 hours ago

ಭೀಕರ ಸರಣಿ ಅಪಘಾತ : ಬೆಂಗಳೂರಿನ 6 ವಿದ್ಯಾರ್ಥಿಗಳು ಸೇರಿ 7 ಮಂದಿ ಸಾವು

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ.ಸತ್ಯವರ ಗ್ರಾಮದ ಸಮೀಪದ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ (NH-648) ಮತ್ತು…

2 hours ago

ಓದುಗರ ಪತ್ರ | ಬಸ್ ತಂಗುದಾಣ ನಿರ್ಮಿಸಿ

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ, ರಾಮಕೃಷ್ಣ ವೃತ್ತದಿಂದ (ಆಂದೋಲನ ಸರ್ಕಲ್), ಕುವೆಂಪು ನಗರದ ಕಾಂಪ್ಲೆಕ್ ತನಕದ ಸುಮಾರು ಒಂದು ಕಿ.ಮೀ. ದೂರದ…

2 hours ago

ಶಿವರಾತ್ರಿ ಜಾತ್ರೆ | ಮ.ಬೆಟ್ಟದಲ್ಲಿ ಸಕಲ ಸಿದ್ಧತೆ ; ನಾಳೆಯಿಂದ ಐದು ದಿನ ಸಂಭ್ರಮ

ಹನೂರು : ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.14 ರಿಂದ 18 ರವರೆಗೆ ಐದು ದಿನಗಳ…

2 hours ago