ವಾಷಿಂಗ್ಟನ್: ದಿಗ್ಗಜ ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ಖಾತೆಗಳನ್ನು ರದ್ದು ಮಾಡಿದ ಬೆನ್ನಲ್ಲೇ ಇದೀಗ, ಭಾರತದ ಮೈಕ್ರೋಬ್ಲಾಗಿಂಗ್ ಸೈಟ್ ‘ಕೂ‘ ಆ್ಯಪ್‌ನ ಖಾತೆಯನ್ನು ಟ್ವಿಟರ್ ಅಮಾನತು ಮಾಡಿದೆ.
ಬಳಕೆದಾರರ ಸಮಸ್ಯೆಗಳನ್ನು ಆಲಿಸಲು ಟ್ವಿಟರ್‌ನಲ್ಲಿದ್ದ ‘ಕೂ‘ ಆ್ಯಪ್‌ನ @kooeminence ಎನ್ನುವ ಖಾತೆಯನ್ನು ಶುಕ್ರವಾರ ರದ್ದು ಮಾಡಲಾಗಿದೆ.
ಟ್ವಿಟರ್‌ನ ಈ ವರ್ತನೆಗೆ ಕೂ ಆ್ಯಪ್‌ನ ಸಹ ಸಂಸ್ಥಾಪಕ ಮಾಯಾಂಕ್ ಬಿದವಟ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನನಗೆ ಮರೆತು ಹೋಗಿತ್ತು. ಇನ್ನೂ ಇದೆ. ಮಸ್ಟೋಡೋನ್ (ಟ್ವಿಟರ್‌ನ ಪ್ರತಿಸ್ಪರ್ಧಿ) ಲಿಂಕ್‌ಗಳು ಸುರಕ್ಷಿತವಲ್ಲ ಎಂದು ಅದರ ಖಾತೆಯನ್ನು ನಿಷ್ಕ್ರೀಯಗೊಳಿಸಲಾಯ್ತು. ಇದೀಗ ಕೂ ನ ಖಾತೆಯನ್ನು ರದ್ದು ಮಾಡಲಾಗಿದೆ. ನಿಜವಾಗಿಯೂ ನಿಮಗೆ ಎಷ್ಟು ನಿಯಂತ್ರಣ ಬೇಕು?‘ ಎಂದು ಪ್ರಶ್ನೆ ಮಾಡಿದ್ದಾರೆ.
ಕೂ ಆ್ಯಪ್ ಬಳಸಲು ಉದ್ದೇಶಿಸುವ ವಿಐಪಿಗಳು, ಸೆಲೆಬ್ರೆಟಿಗಳು ತಮಗೆ ಏನಾದರೂ ಗೊಂದಲು ಇದ್ದರೆ, ಪರಿಹರಿಸಿಕೊಳ್ಳಲು ಈ ಖಾತೆಯನ್ನು ಕೆಲ ದಿನಗಳ ಹಿಂದಷ್ಟೇ ತೆರಯಲಾಗಿತ್ತು.
ಸಂಭಾಷಣೆಗೆ ಇದ್ದ ವೇದಿಕೆಯನ್ನು ಟ್ವಿಟರ್ ರಾತ್ರೋ ರಾತ್ರಿ ಕೊಂದು ಹಾಕಿದೆ ಎಂದು ಮಾಯಾಂಕ್ ಕಿಡಿ ಕಾರಿದ್ದಾರೆ. ಅಲ್ಲದೇ ಹಿಂದಿನ ವಾರ ಟ್ವಿಟರ್ ಮಾಡಿದ ಕೆಲವು ಕೆಲಸಗಳು ಸರಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು: ನಗರದ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾದ 102 ನೇ ವರ್ಷದ ಮೈಸೂರು ಕರಗ ಮಹೋತ್ಸವದ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ.…
ಬೆಂಗಳೂರು: ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ನೀಡುವ ರಾಜ್ಯ ಸರ್ಕಾರ ಇನ್ನೊಂದೆಡೆ ಬೆಲೆ ಏರಿಕೆಯನ್ನು ಮಾಡುತ್ತಲೇ ಬಂದಿದೆ ಎಂಬ ಸಾರ್ವಜನಿಕರ ಆರೋಪ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಏಪ್ರಿಲ್ 2026ರ ಅಂತ್ಯದ ವೇಳೆಗೆ ಬಿಸಿಲಿನ ತಾಪಮಾನ ತೀವ್ರವಾಗಿ ಹೆಚ್ಚಾಗಿದೆ. ಇದು ಜನಜೀವನದ ಮೇಲೆ…
ಬೆಂಗಳೂರು: ನಟ ರಾಜ್ ಕುಮಾರ್ ಸಮಾಧಿ ವಿಚಾರವಾಗಿ ಹೇಳಿಕೆ ನೀಡಿದ್ದ ನಟ ಚೇತನ್ ಅಹಿಂಸಾ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಡಾ.ರಾಜ್‌ಕುಮಾರ್…
ಬೆಳಗಾವಿ: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲಲ್. ಅಧಿಕಾರ ಹಂಚಿಕೆ ವಿಚಾರವಾಗಿ ಏನೆಲ್ಲಾ ಮಾತುಕತೆ ಆಗಿದೆ ಎಂಬುದೂ ಗೊತ್ತಿಲ್ಲ ಎಂದು…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದ್ದು, ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಭೀಕರ…