ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದ ಕುಗ್ಗುತ್ತಿದೆಯಂತೆ ಪುರುಷರ ಜನನಾಂಗ!!

ಹೊಸದಿಲ್ಲಿ: ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಪುರುಷರ ಮರ್ಮಾಂಗದ ಗಾತ್ರ ಕುಗ್ಗುತ್ತಿದೆ. ಇದು ಭವಿಷ್ಯದ ಮಕ್ಕಳ ಸಂತಾನ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಶಾನ್‌ ಸ್ವಾನ್‌ ಅವರು ಬರೆದಿರುವ ಕೌಂಟ್‌ಡೌನ್‌ ಎನ್ನುವ ಪುಸ್ತಕದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ಪರಿಸರ ಮಾಲಿನ್ಯದಿಂದಾಗಿ ಮಕ್ಕಳು ಚಿಕ್ಕ ಗಾತ್ರದ ಜನನಾಂಗದೊಂದಿಗೆ ಹುಟ್ಟುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಮಾಲಿನ್ಯದ ಪರಿಣಾಮದಿಂದಾಗಿ ಮಾನವ ಜನಾಂಗದ ವೀರ್ಯಾಣು ಸಾಮರ್ಥ್ಯದ ಮೇಲೆಯೂ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಕೌಂಟ್‌ಡೌನ್‌ ಪುಸ್ತಕದಲ್ಲಿ ಶಾನ್‌ ಅವರು ಬರೆದಿದ್ದಾರೆ.

ಈ ಗಂಭೀರ ಆರೋಗ್ಯ ಸಮಸ್ಯೆಗೆ ಫತಲೆಟ್‌ ಎನ್ನುವ ರಾಸಾಯನಿಕ ಮುಖ್ಯ ಕಾರಣ ಎಂದು ಶಾನ್‌ ಸ್ವಾನ್‌ ಅವರು ಉಲ್ಲೇಖಿಸಿದ್ದಾರೆ. ಪ್ಲಾಸ್ಟಿಕ್‌ ಬೆಂಡಾಗಲು ಬಳಸುವ ಈ ರಾಸಾಯನಿಕವು ತಿನ್ನುವ ಆಹಾರ, ಆಟಿಕೆ ಮೊದಲಾದವುಗಳಿಂದ ಹಿಡಿದು ಎಲ್ಲದರಲ್ಲೂ ಸೇರಿಕೊಂಡಿದ್ದು ಇದು ಮಾನವ ಜನಾಂಗಕ್ಕೆ ಒಂದು ಶಾಪವಾಗಿದೆ ಎಂದು ಅವರು ಹೇಳುತ್ತಾರೆ.

× Chat with us