ಸ್ಯಾನಿಫ್ರಾನ್ಸಿಸ್ಕೂ : ಮೆಟಾ ಕಂಪನಿ ಮಾಲೀಕತ್ವದ ಮಸೇಜಿಂಗ್ ಆಪ್ ವಾಟ್ಸಪ್ ತನ್ನ ಬಳಕೆದಾದರಿಗೆ ಹೊಸದೊಂದು ಅಪ್ಡೇಟ್ ನೀಡಲು ಮೂಂದಾಗಿದೆ.
ವಾಟ್ಸಪ್ ಮತ್ತೊಂದು ಪೀಚರ್ ಅನ್ನು ಪರಿಚಯಿಸುತ್ತಿದ್ದ,ಇದು ವಾಟ್ಸಪ್ ಗ್ರೂಪ್ ಗಳಲ್ಲಿ ಗ್ರೂಪಿನಿಂದ ಹೊರಗೋಗುವವರು ಅಂದರೆ ಲೆಫ್ಟ್ ಆದಾಗ ಅದು ಆ ಗ್ರೂಪಿನಲ್ಲಿರುವ ಇಲ್ಲರಿಗೂ ಗೊತ್ತಾಗುತ್ತಿತ್ತು.ಆದರೆ ಇನ್ನು ಮುಂದೆ ವಾಟ್ಸಪ್ ಗ್ರೂಪ್ ನಲ್ಲಿ ಸೈಲೆಂಟಾಗಿ ಲೆಫ್ಟ್ ಆಗಬಹುದಾಗಿದೆ. ಗ್ರೂಪ್ ಅಡ್ಮಿನ್ ಅವರನ್ನು ಮಾತ್ರ ಹೊರತುಪಡಿಸಿ ಗ್ರೂಪಿನಲ್ಲಿರುವ ಇನ್ನಿತರ ಸದಸ್ಯರಿಗೆ ಗೊತ್ತಾಗದಂತೆ ನೂತನ ಅಪ್ಟೇಟ್ ಮಾಡಲಾಗಿದೆ. ಇದನ್ನು ಪ್ರಯೋಗಿಕವಾಗಿ ಜಾರಿಗೆ ತರಲಾಗಿದ್ದು ಇದು ಯಶಸ್ವಿಯಾದ ನಂತರ ಎಲ್ಲರಿಗೂ ಲಭ್ಯವಾಗಿ ಬಳಕೆಗೆ ಬರಲಿದೆ ಎಂದು WABetalnfo ಮಾಹಿತಿನ್ನು ನೀಡಿದೆ.
ಮುಂದುವರಿದು ವಾಟ್ಸಪ್ ಗ್ರೂಪ್ ಅಡ್ಮಿನ್ಗಳು ಮಿತಿಯನ್ನು ಹೆಚ್ಚಳ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಕಳುಹಿಸಿದ ಮೆಸೇಜ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುವ ಮತ್ತು ಡಿಲೀಟ್ ಮಾಡಲು 1 ತಾಸು 8 ನಿಮಿಷಗಳನ್ನು ನೀಡಲಾಗಿದೆ. ಈ ಸಮಯವನ್ನು ಗರಿಷ್ಠ ಅಂದರೆ 48 ತಾಸುಗಳನ್ನು ಕೊಡಲು ಮು,ದಾಗಿದೆ.