ಹೊಸದಿಲ್ಲಿ: ‘ಡಿಸ್ನಿ ಸ್ಟಾರ್’, ‘ಝೀ ಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್’ ಮತ್ತು ‘ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾ ಲಿಮಿಟೆಡ್’ ಸೇರಿದಂತೆ ಪ್ರಮುಖ ವಾಹಿನಿಗಳು ಕೇಬಲ್ ಆಪರೇಟರ್‌ಗಳಿಗೆ ಸಿಗ್ನಲ್ ತಡೆ ಹಿಡಿದಿವೆ.
ಹೊಸ ಸುಂಕದ ಆದೇಶದ (ಎನ್‌ಟಿಒ) ಅಡಿಯಲ್ಲಿ, ಪರಿಷ್ಕೃತ ದರದ ಒಪ್ಪಂದಕ್ಕೆ ಸಹಿ ಹಾಕದ ಕಾರಣಕ್ಕೆ ವಾಹಿನಿಗಳು ಈ ನಿರ್ಧಾರಕ್ಕೆ ಬಂದಿವೆ.
‘ಎನ್‌ಟಿಒ’ ಅಡಿಯಲ್ಲಿ ಪರಿಷ್ಕೃತ ದರವು ಶೇಕಡ 25 ರಿಂದ 35ಕ್ಕೆ ಹೆಚ್ಚಳಗೊಳ್ಳುತ್ತದೆ. ಗ್ರಾಹಕರ ಮೇಲೆ ಹೊರೆ ಬೀಳುತ್ತದೆ ಎಂದು ಡಿಜಿಟಲ್ ಕೇಬಲ್ ಟೆಲಿವಿಷನ್ ಆಪರೇಟರ್‌ಗಳ ಸಂಘ ‘ಆಲ್ ಇಂಡಿಯಾ ಡಿಜಿಟಲ್ ಕೇಬಲ್ ಫೆಡರೇಶನ್ (ಎಐಡಿಸಿಎಫ್)’ ಆರೋಪಿಸಿದ್ದು, ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ.
ಪರಿಷ್ಕೃತ ದರಕ್ಕೆ ಸಹಿ ಹಾಕುವಂತೆ ಮನರಂಜನಾ ವಾಹಿನಿಗಳು ಫೆ.15 ರಂದು ಕೇಬಲ್ ಆಪರೇಟರ್‌ಗಳು/ಮಲ್ಟಿ ಸಿಸ್ಟಮ್ ಆಪರೇಟರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದವು. ಆದರೆ, ಕೇಬಲ್ ಆಪರೇಟರ್‌ಗಳು ನೋಟಿಸ್ ಅನ್ನು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮನರಂಜನಾ ವಾಹಿನಿಗಳು ಸಿಗ್ನಲ್ ನಿಲ್ಲಿಸಿವೆ. ವಾಹಿನಿಗಳ ಈ ಕ್ರಮದಿಂದಾಗಿ ದೇಶದಾದ್ಯಂತ ಸುಮಾರು 4.5 ಕೋಟಿ ಕೇಬಲ್ ಟಿವಿ ಕುಟುಂಬಗಳಿಗೆ ಸೇವೆಯಲ್ಲಿ ಅಡಚಣೆಯಾಗಿದೆ.
‘ಮನರಂಜನಾ ವಾಹಿಗಳು ಪ್ರಸ್ತಾಪಿಸಿದ ಪರಿಷ್ಕೃತ ದರದಲ್ಲಿ ವಿಪರೀತ ಏರಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಶೇ 60ರಷ್ಟು ಹೊರಾಂಗಲಿದೆ’ ಎಂದು ಕೇಬಲ ಟಿ.ವಿ ಆಪರೇಟರ್‌ಗಳು ಹೇಳಿದ್ದಾರೆ.
ಫೆಬ್ರುವರಿಯಲ್ಲಿ ಜಾರಿಗೆ ಬಂದಿರುವ ಎನ್‌ಟಿಒ 3.0ರಲ್ಲಿ ಜನಪ್ರಿಯ ವಾಹಿನಿಗಳ ದರದಲ್ಲಿ ಶೇಕಡ 15 ರಷ್ಟು ಹೆಚ್ಚಳವಾಗಿದೆ.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…