ಮೇಲೇಳಲು ಹರಸಾಹಸ ಪಡುತ್ತಿದೆ. ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್ಎನ್ಎಲ್ ಸಾಕಷ್ಟು ಲಾಸ್ನಲ್ಲಿದೆ. ಇದರ ನಡುವೆ ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳಾದ ರಿಲಯನ್ಸ್ ಜಿಯೋ , ಏರ್ಟೆಲ್ ಹಾಗೂ ವೋಡಾಫೋನ್ ಐಡಿಯಾ ಇತ್ತೀಚೆಗೆ ಪೈಪೋಟಿಗೆ ಬಿದ್ದವರಂತೆ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿವೆ. ಜೊತೆಗೆ 5ಜಿ ಸೇವೆಯನ್ನು ಕೂಡ ಪರಿಚಯಿಸುತ್ತಿದೆ. ಹೀಗಿರುವಾಗ ಬಿಎಸ್ಎನ್ಎಲ್ ಸದ್ದಿಲ್ಲದೆ ಎರಡು ಹೊಸ ಧಮಾಕ ಯೋಜನೆಗಳನ್ನು ಅನಾವರಣ ಮಾಡಿದೆ.
ಬಿಎಸ್ಎನ್ಎಲ್ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಅನಿಯಮಿತ ಉಪಯೋಗ ಬಯಸುವವರಿಗೆ ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ. 269 ರೂ. ಪ್ಲಾನ್‌ನಲ್ಲಿ ದಿನಕ್ಕೆ 2GB ಡೇಟಾ ಪ್ರಯೋಜನ ಸಿಗುತ್ತದೆ. ಯಾವುದೇ ನೆಟ್ವರ್ಕ್ಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಉಚಿತ ಪಡೆಯಬಹುದು. ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಬಿಎಸ್ಎನ್ಎಲ್ ಫ್ರೀ ಟ್ಯೂನ್ ಲಭ್ಯವಿದ್ದು ಇದರ ಮೂಲಕ ನಿಮಗೆ ಬೇಕಾದ ಹಾಡುಗಳನ್ನು ಉಚಿತವಾಗಿ ಹಾಕಬಹುದು. ಇದನ್ನು ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡಬಹುದಾಗಿದೆ. ಇದರ ಜೊತೆಗೆ ಎರಾಸ್ ನೌ, ಚಾಲೆಂಜೆಸ್ ಡರೇನಾ ಗೇಮ್ಸ್ ಸೇರಿದಂತೆ ಅನೇಕ ಸೌಲಭ್ಯವನ್ನು ಪಡೆಯಬಹುದು.
769 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಕೂಡ ದಿನಕ್ಕೆ 2GB ಡೇಟಾ ಪ್ರಯೋಜನ ಪಡೆಯಬಹುದು. ಅನಿಯಮಿತ ಕರೆ ಸೌಲಭ್ಯ ನೀಡಲಾಗಿದ್ದು 100 ಎಸ್ಎಮ್ಎಸ್ ಉಚಿತವಿದೆ. 269 ರೂ. ಪ್ಲಾನ್ನಲ್ಲಿರುವ ಎಲ್ಲ ಪ್ರಯೋಜನ ಇದರಲ್ಲೂ ಇದೆ. ವ್ಯಾಲಿಡಿಯಲ್ಲಿ ಮಾತ್ರ ವ್ಯತ್ಯಾಸವಿದೆ. ಇದು 90 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಎರಡು ಹೊಸ ಪ್ಲಾನ್ ಈಗಾಗಲೇ ಲೈವ್ ಆಗಿದ್ದು ಆಸಕ್ತ ಬಿಎಸ್ಎನ್ಎಲ್ ಬಳಕೆದಾರರು ಆ್ಯಕ್ಟಿವ್ ಮಾಡಬಹುದು.
ಬಿಎಸ್‌ಎನ್ಎಲ್ ಟೆಲಿಕಾಂನ ಇತರೆ ದೀರ್ಘಾವಧಿ ಪ್ಲಾನ್‌ಗಳನ್ನು ಪರಿಗಣಿಸುವುದಾದರೆ 1499 ರೂ. ಬೆಲೆಯ ವಾರ್ಷಿಕ ಪ್ಲಾನ್ ಗಮನ ಸೆಳೆದಿದೆ. ಈ ಪ್ರಿಪೇಯ್ಡ್ ಪ್ಲಾನ್ 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನ ನೀಡಲಿದೆ. ಇದಲ್ಲದೆ ಬಿಎಸ್ಎನ್‌ಎಲ್ 1999ರೂ. ಬೆಲೆಯ ವಾರ್ಷಿಕ ಪ್ಲಾನ್ ಹೊಂದಿದೆ. ಈ ಪ್ಲಾನ್‌ನಲ್ಲಿ 100GB ಹೆಚ್ಚುವರಿ ಡೇಟಾದೊಂದಿಗೆ 500GB ನಿಯಮಿತ ಡೇಟಾವನ್ನು ನೀಡುತ್ತದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಇದು 365 ದಿನಗಳವರೆಗೆ Eros Now ಮನರಂಜನಾ ಸೇವೆಗೆ ಪ್ರವೇಶವನ್ನು ನೀಡುತ್ತದೆ.
ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…