ಆಸ್ಟ್ರೇಲಿಯ: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ಡೆಪ್ಯೂಟಿ ಪ್ರೀಮಿಯರ್ ಜಾನ್ ಬರಿಲಾರೊ ಅವರ ಬಗ್ಗೆ ವಿಶ್ಲೇಷಕ ಶಾಂಕ್ಸ್ ಅವರು ಜಾನ್ ಅವರ ಮೇಲೆ ಭ್ರಷ್ಟಾಚಾರಕ್ಕೆ ಸಂಬಂಧಿಸದಂತೆ ಆರೋಪ ಮಾಡಿದ್ದರು. ಇದರಿಂದಾಗಿ ಜಾನ್ ತನ್ನ ರಾಜಕೀಯ ಬದುಕನ್ನೆ ತೊರೆಯುವಂತಾಯಿತು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ ಶ್ಯಾಂಕ್ಸ್ ವಿರುದ್ಧ ಜಾನ್ ಕೋರ್ಟ್ ಮೆಟ್ಟಿಲೇರಿದ್ದರು. ಇದಲ್ಲದೇ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸದ ಗೂಗಲ್ ವಿರುದ್ಧವೂ ಜಾನ್ ದೂರು ನೀಡಿದ್ದರು.
ಯಾವುದೇ ಸಾಕ್ಷ್ಯಧಾರಗಳಿಲ್ಲದೆ ಗೂಗಲ್ನಲ್ಲಿ ಜಾನ್ ಕುರಿತು ಸುದ್ದಿಗಳು ಹರಡಿದ್ದು. ಇದನ್ನು ತಡೆಯದ ಕಾರಣ ಪ್ರಮುಖ ಸರ್ಚ್ ಇಂಜಿನ್ ಕಂಪನಿ ಗೂಗಲ್ ಗೆ ಆಸ್ಟ್ರೇಲಿಯಾ ಕೋರ್ಟ್ ಬಿಸಿ ಮುಟ್ಟಿಸಿದೆ. ಯೂಟ್ಯೂಬ್ನಲ್ಲಿ ವಿವಾದಾತ್ಮಕ ವೈರಲ್ ವಿಡಿಯೋಗಳಿಂದ ರಾಜಕೀಯ ತೊರೆದ ಆರೋಪದ ಮೇಲೆ ಆಸ್ಟ್ರೇಲಿಯಾದ ರಾಜಕಾರಣಿಯೊಬ್ಬರಿಗೆ $5,15,000 ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 4 ಕೋಟಿ ರೂ.) ಪಾವತಿಸಲು ಆದೇಶಿಸಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ಡೆಪ್ಯೂಟಿ ಪ್ರೀಮಿಯರ್ ಜಾನ್ ಬರಿಲಾರೊ ಅವರನ್ನು ಟೀಕಿಸಿದ್ದಲ್ಲದೇ, ಭ್ರಷ್ಟಾಷಾರ ಆರೋಪ ಹೊರಿಸಿ ರಾಜಕೀಯ ವಿಶ್ಲೇಷಕರಾದ ಜೋರ್ಡಾನ್ ಶಾಂಕ್ಸ್ ಎಂಬುವರು 2020ರ ಕೊನೆಯಲ್ಲಿ ಯೂಟ್ಯೂಬ್ನಲ್ಲಿ ಕೆಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು
ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ವಿಶ್ಲೇಷಕ ಶಾಂಕ್ಸ್ ಅವರು, ಜಾನ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿದ್ದರು. ಇದರಿಂದಾಗಿ ಜಾನ್ 2021ರಲ್ಲಿ ರಾಜಕೀಯವನ್ನೇ ತೊರೆಯಬೇಕಾಯಿತು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ ಶ್ಯಾಂಕ್ಸ್ ವಿರುದ್ಧ ಜಾನ್ ಕೋರ್ಟ್ ಮೆಟ್ಟಿಲೇರಿದ್ದರು. ಇದಲ್ಲದೇ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸದ ಗೂಗಲ್ ವಿರುದ್ಧವೂ ಜಾನ್ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಕೋರ್ಟ್, ಜಾನ್ ವಿರುದ್ಧ ಅಪ್ಲೋಡ್ ಮಾಡಿದ ಯೂಟ್ಯೂಬ್ ವಿಡಿಯೋಗಳ ಮೂಲಕ ಗೂಗಲ್ ಕೋಟ್ಯಂತರ ರೂಪಾಯಿ ಗಳಿಸಿದೆ. ಜಾನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪದೇಪದೆ ಭ್ರಷ್ಟಾಚಾರದ ಆರೋಪ ಹೊರಿಸುವುದು, ದ್ವೇಷದ ಮಾತುಗಳನ್ನು ಬಿತ್ತರಿಸಿದ್ದಕ್ಕೆ ಜಾನ್ ರಾಜಕೀಯದಿಂದಲೇ ಹೊರ ನಡೆದಿದ್ದಾರೆ. ಈ ಮೂಲಕ ಅವರಿಗೆ ಮಾನ ಹಾನಿ ಮಾಡಿದಂತಾಗಿದೆ
ಪ್ರಕರಣದಲ್ಲಿ ಗೂಗಲ್ ಕ್ರಮವೂ ಸಮರ್ಥನೀಯವಲ್ಲ ಎಂದು ತಿಳಿಸಿದ ಕೋರ್ಟ್, ಜಾನ್ಗೆ ಮಾನನಷ್ಟಕ್ಕಾಗಿ ಗೂಗಲ್, 5,15,00 ಡಾಲರ್ ಪರಿಹಾರವಾಗಿ ನೀಡಬೇಕು ಎಂದು ಫೆಡರಲ್ ನ್ಯಾಯಾಲಯವು ತೀರ್ಪು ನೀಡಿದೆ. ಈ ತೀರ್ಪಿನ ಬಗ್ಗೆ ಗೂಗಲ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.