ಹುಡುಗಿಯರಿಬ್ಬರ ಸಲಿಂಗ ಪ್ರೇಮಕ್ಕೆ ಒಪ್ಪದ ಪೋಷಕರು; ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ

ಪಾಟ್ನಾ(ಬಿಹಾರ): ನಾವಿಬ್ಬರು ಪ್ರೀತಿಯುತ್ತಿದ್ದೇವೆ, ಇದಕ್ಕೆ ನಮ್ಮ ಮನಗಳಲ್ಲಿ ಒಪ್ಪುತ್ತಿಲ್ಲ, ನಮಗೆ ರಕ್ಷಣೆ ಬೇಕಾಗಿದೆ ಎಂದು ಯುವತಿಯರಿಬ್ಬರು ಪೊಲೀಸ್ ಠಾಣಾ ಮಟ್ಟಿಲೇರಿರುವ ಘಟನೆ ಬಿಹಾರದ ಪಾಟ್ನಾದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಇಂದ್ರಪುರಿ ನಿವಾಸಿ ತನಿಷ್ಕ ಶ್ರೀ ಹಾಗೂ ಪಾಟ್ನಾದ ಸಹರ್ಸಾ ನಿವಾಸಿ ಶ್ರೇಯಾ ಘೋಷ್​ ಒಟ್ಟಿಗೆ ಇರಲು ಇಚ್ಚಿಸಿದ್ದು. ಇದಕ್ಕೆ ಇಬ್ಬರ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ತನಿಷ್ಕ ಶ್ರೀಯನ್ನ ಗೃಹಬಂಧನದಲ್ಲಿರಿಸಲಾಗಿದೆ. ಜೊತೆಗೆ ಆಕೆಯ ಬಳಿಯ ಮೊಬೈಲ್​ ಸಹ ಕಸಿದುಕೊಂಡು, ಮನೆಯಿಂದ ಹೊರಹೋಗದಂತೆ ತಾಕೀತು ಮಾಡಿದ್ದಾರೆ.

ಆದರೆ, ಸಿನಿಮಾ ನೋಡುವ ನೆಪದಲ್ಲಿ ಇಬ್ಬರೂ ಮತ್ತೆ ಭೇಟಿಯಾಗಿದ್ದಾರೆ. ಇದರ ಬೆನ್ನಲ್ಲೇ ತನಿಷ್ಕಶ್ರೀ ಕುಟುಂಬದ ಸದ್ಯರು ಪಾಟಲಿಪುತ್ರ ಪೊಲೀಸ್ ಠಾಣೆಯಲ್ಲಿ ಶ್ರೇಯಾ ಘೋಷ್​ ವಿರುದ್ಧ ಅಪಹರಣದ ಪ್ರಕರಣ ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಾವು ಕಳೆದ ಐದು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದು, ಒಟ್ಟಿಗೆ ವಾಸಿಸಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಸದಸ್ಯರು ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.

ಇದರ ಬೆನ್ನಲ್ಲೇ ತನಿಷ್ಕಶ್ರೀ ಕುಟುಂಬದ ಸದ್ಯರು ಪಾಟಲಿಪುತ್ರ ಪೊಲೀಸ್ ಠಾಣೆಯಲ್ಲಿ ಶ್ರೇಯಾ ಘೋಷ್​ ವಿರುದ್ಧ ಅಪಹರಣದ ಪ್ರಕರಣ ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಾವು ಕಳೆದ ಐದು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದು, ಒಟ್ಟಿಗೆ ವಾಸಿಸಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಸದಸ್ಯರು ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ. ಇಲ್ಲಿ ಪ್ರಕರಣ ಸ್ವೀಕಾರ ಮಾಡಲು ನಿರಾಕರಣೆ ಮಾಡಿರುವ ಕಾರಣ ಎಸ್​​ಎಸ್​ಪಿ ಮಾನವಜಿತ್​​ ಸಿಂಗ್​​ ಅವರ ನಿವಾಸಕ್ಕೆ ತೆರಳಿ ರಕ್ಷಣೆ ಕೋರಿದ್ದಾರೆ.

ನಾವು 18 ವರ್ಷ ಮೇಲ್ಪಟ್ಟಿದ್ದು, ಒಟ್ಟಿಗೆ ವಾಸಿಸುವ ಹಕ್ಕು ಹೊಂದಿದ್ದೇವೆ. ನನ್ನ ಸ್ವಂತ ಇಚ್ಛೆಯಿಂದಲೇ ಶ್ರೇಯಾ ಜೊತೆ ಇರಲು ಬಯಸುತ್ತೇನೆಂದು ತನಿಷ್ಕಶ್ರೀ ಹೇಳಿಕೊಂಡಿದ್ದಾಳೆ. ಇದಕ್ಕೆ ಶ್ರೇಯಾ ಘೋಷ್​ ಕೂಡ ಧ್ವನಿಗೂಡಿಸಿದ್ದು, ಇಬ್ಬರೂ ಒಟ್ಟಿಗೆ ವಾಸಿಸಲು ಮುಂದಾಗಿದ್ದೇವೆ ಎಂದಿದ್ದಾರೆ. ಪ್ರಕರಣ ಆಲಿಸಿರುವ ಎಎಸ್​ಪಿ ಮಾನವಜಿತ್​​ ಸಿಂಗ್​, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅವರನ್ನ ಕರೆದುಕೊಂಡು ಹೋಗುವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರ ಬಗ್ಗೆ ಗಮನ ಹರಿಸುವುದಾಗಿ ಇಬ್ಬರು ಯುವತಿಯರಿಗೆ ಭರವಸೆ ನೀಡಿದ್ದಾರೆ.