ಕೊಯಮತ್ತೂರಿಂದ ಚಿಕ್ಕಬಳ್ಳಾಪುರಕ್ಕೆ ಬೈಕ್ನಲ್ಲೇ ಹೋದ ಸದ್ಗುರು, ಅಷ್ಟಕ್ಕೂ ಈ ಬೈಕ್ ಯಾವುದು?
ಮೈಸೂರು: ಆದ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರು ಇಂದು ಸುತ್ತೂರು ಶ್ರೀ ಅವರನ್ನು ಭೇಟಿಯಾದರು. ಅದಕ್ಕಾಗಿ ಅವರು ಕೊಯಮತ್ತೂರಿನಿಂದ ಬೈಕ್ನಲ್ಲಿ ಬಂದದ್ದೇ ವಿಶೇಷ.
ಬೈಕ್ ಪ್ರಪಂಚದಲ್ಲೇ ದುಬಾರಿ ಎನ್ನಲಾಗುವು ಡ್ಯುಕಾಟಿ ಬೈಕ್ನಲ್ಲಿ ಬಂದ ಸ್ವಾಮೀಜಿ ಅವರು ಸುತ್ತೂರು ಶ್ರೀಗಳನ್ನು ಭೇಟಿಯಾದರು.
ಈ ಬೈಕ್ನ ಬೆಲೆ ಮಾರುಕಟ್ಟೆಯಲ್ಲಿ ಸುಮಾರು 17 ಲಕ್ಷ ರೂಪಾಯಿ ಇದೆ. ಸದ್ಗುರು ಅವರು ಈ ಹಿಂದೆ ಕಾವೇರಿ ಕಾಲಿಂಗ್ ಅಭಿಯಾನಕ್ಕಾಗಿ ಬೈಕ್ ಹಾಗೂ ಜೀಪ್ನಲ್ಲಿ ಸಂಚರಿಸಿದ್ದರು.
ಹಾಗೆ ನೋಡಿದರೆ ಸದ್ಗುರು ಅವರಿಗೆ ಬೈಕ್ ಕ್ರೇಜ್ ಸ್ವಲ್ಪ ಜಾಸ್ತಿಯೇ ಇದೆ ಎನ್ನುಬಹುದು. ಈ ಹಿಂದೆ ಅವರು ಬಿಎಂಡಬ್ಲ್ಯೂ ಬೈಕ್ನಲ್ಲಿ ಸುತ್ತಾಡಿದ್ದರು. ಲೇಹ್, ಲಡಾಖ್, ಹಿಮಾಲಯ ಮೊದಲಾದ ಸ್ಥಳಗಳಿಗೆ ಬೈಕ್ ಟ್ರಿಪ್ ಮಾಡುವ ಸದ್ಗುರು ಅವರ ಫೋಟೊಗಳ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಜೀಪ್ ಕಂಪಾಸ್ ವಾಹನದಲ್ಲಿ ಅವರು ಮೈಸೂರಿನಲ್ಲಿ ಸುತ್ತಾಡಿದ್ದನ್ನು ಇಲ್ಲಿ ಸ್ಮರಿಸಬಹುದು.