ಕೋವಿಡ್: ಆರ್‌ಟಿಪಿಸಿಆರ್‌ ಫಲಿತಾಂಶದ ವರದಿ 24 ಗಂಟೆಯೊಳಗೆ ನೀಡಲು ಲ್ಯಾಬ್‌ಗಳಿಗೆ ಸೂಚನೆ

ಬೆಂಗಳೂರು: ಕೋವಿಡ್‌ ಸಂಬಂಧ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿದ 24 ಗಂಟೆಯೊಳಗೆ ಪರೀಕ್ಷೆ ಫಲಿತಾಂಶದ ವರದಿ ನೀಡಬೇಕು ಎಂದು ಖಾಸಗಿ ಪ್ರಯೋಗಾಲಯಗಳಿಗೆ ಸರ್ಕಾರ ಸೂಚನೆ ನೀಡಿದೆ.

ಕೋವಿಡ್‌ ಪರೀಕ್ಷೆ ನಂತರ ಫಲಿತಾಂಶ ವರದಿ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ, ಪರೀಕ್ಷೆಯಾದ 24 ಗಂಟೆಯೊಳಗಡೆ ವರದಿ ನೀಡುವಂತೆ ತಿಳಿಸಲಾಗಿದೆ. ವರದಿ ನೀಡದ ಪ್ರಯೋಗಾಲಯಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಐಸಿಎಂಆರ್‌ ಪೋರ್ಟಲ್‌ನಲ್ಲಿ ಫಲಿತಾಂಶ ದಾಖಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಪರ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.