ಕಾಂಗ್ರೆಸ್‌ ಪಕ್ಷಕ್ಕೆ ಎಂಟು ಕೋಟಿ ವಂಚನೆ ಆರೋಪಕ್ಕೆ ರಮ್ಯಾ ಸ್ಪಷ್ಟನೆ

ಬೆಂಗಳೂರು : “ಇದು ನನ್ನ ವರ್ಚಸ್ಸಿಗೆ ದಕ್ಕೆ ತರುವ ಕೆಲಸವಾಗಿದ್ದು, ನಾನು ವೈಯೂಕ್ತಿಕ ಕಾರಣಗಳಿಂದ ಮಾತ್ರ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ” ಎಂದು ಕಾಂಗ್ರೆಸ್‌ ಪಕ್ಷಕ್ಕೆ ಎಂಟು ಕೋಟಿ ವಂಚಿಸಿದ್ದಾರೆ ಎಂಬ ಆರೋಪಕ್ಕೆ ನಟಿ ರಮ್ಯಾ ಟ್ವೀಟರ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

 

ಮುಂದುವರಿದು “ಮುಂದಿನ ಕರ್ನಾಟಕ ಭೇಟಿಯ ಸಂದರ್ಭದಲ್ಲಿ  ಈ ವಿಚಾರದ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಬೇಕೆಂದು ನಾನು ಕೆ.ಸಿ. ವೇಣುಗೋಪಾಲ್‌ ರಲ್ಲಿ ಮನವಿ ಮಾಡುತ್ತಿದ್ದೇನೆ, ಈ ಟ್ರೋಲ್‌ ಮತ್ತು ನಿಂದನೆಗಳೊಂದಿಗೆ ಜೀವಿಸುವ ಅವಶ್ಯಕತೆ ನನಗೆ ಇರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.