ಮೈಸೂರು: ದಾಖಲೆ ನಿರ್ಮಿಸಿದ ಪ್ರವಾಸಿಗರ ದಂಡು!
ಭಾನುವಾರ ಒಂದೇ ದಿನಕ್ಕೆ 20 ಸಾವಿರ ಪ್ರವಾಸಿಗರ ಆಗಮನ.
ಕೋವಿಡ್ ನಂತರದ ಮೊದಲ ಅತಿ ಹೆಚ್ಚು ಪ್ರವಾಸಿಗರ ಆಗಮನ.
ಮೈಸೂರು : ಕೋವಿಡ್-19 ರ ಸಮಸ್ಯೆಯ ನಂತರ ಇದೇ ಮೊದಲ ಬಾರಿಗೆ ಮೈಸೂರು ಮೃಗಾಲಯಕ್ಕೆ ಭಾನುವಾರ ಒಂದೇ ದಿನ ಸುಮಾರು 25 ಸಾವಿರ ಪ್ರವಾಸಿಗರು ಆಗಮಿಸಿರುವುದು ದಾಖಲೆ ನಿರ್ಮಿಸಿದೆ.
ಅದೇ ದಿನ ಮೈಸೂರು ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಸುಮಾರು 20 ಸಾವಿರವಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಮುಚ್ಚಲಾಗಿದ್ದ ಮೃಗಾಲಯದಲ್ಲಿ ಇದೀಗ ಚೇತರಿಕೆ ಕಂಡುಬಂದಿದೆ. ಎಂದು ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ನೆನ್ನೆ ದಿನ ಸೋಮವಾರವೂ ಕೋಡ ಸುಮಾರು 14 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು ಮೃಗಾಲಯದ ಸಿಬ್ಬಂದಿಗಳಿಗೆ ಅಚ್ಚರಿ ಮೂಡಿಸಿದೆ.