ನಂಜನಗೂಡು: ಧ್ವಂಸಗೊಂಡ ದೇಗುಲ ಸ್ಥಳಕ್ಕೆ ಆರ್‌.ಧ್ರುವನಾರಾಯಣ್‌ ಭೇಟಿ

ನಂಜನಗೂಡು: ಸರ್ಕಾರದ ಬೇಜವಾಬ್ದಾರಿತನದಿಂದ ದೇಗುಲ ಧ್ವಂಸಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಟೀಕಿಸಿದರು.

ನಂಜನಗೂಡಿನಲ್ಲಿ ತೆರವುಗೊಂಡ ಹುಚ್ಚಗಣಿ ದೇಗುಲ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ದೇಗುಲ ರಸ್ತೆ ಮಧ್ಯದಲ್ಲಿ ಇಲ್ಲ, ರಸ್ತೆಯಿಂದ ದೂರ ಇದೆ. ಇದು ಒಂದು ಗ್ರಾಮಕ್ಕೆ ಸೀಮಿತವಾಗಿಲ್ಲ. ನಾಲ್ಕೈದು ಗ್ರಾಮದ ಜನತೆ ಇಲ್ಲಿಗೆ ಪೂಜೆಗಾಗಿ ಬರುತ್ತಾರೆ. ದೇವಾಲಯ ತೆರವುಗೊಳಿಸುವ ಮುನ್ನ ಸರ್ಕಾರದ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಬೇಕಿತ್ತು ಎಂದು ಹೇಳಿದರು.

ಕಾರ್ಯಾಚರಣೆಗೆ ಮುನ್ನ ಗ್ರಾಮಸ್ಥರೊಂದಿಗೆ ಚರ್ಚಿಸಿ ದೇಗುಲಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆಂದು ಹೇಳಿ ಒಪ್ಪಿಗೆ ಪಡೆದು ಕ್ರಮಕೈಗೊಂಡಿದ್ದರೆ ಯಾರೂ ತಕರಾರು ತೆಗೆಯುತ್ತಿರಲಿಲ್ಲ. ಆದರೆ, ಏಕಾಏಕಿ ಹೀಗೆ ಧ್ವಂಸ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

× Chat with us