ಮೈಸೂರು: ಇಂದಿನಿಂದ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮಾ.23, 26, 27ರಂದು 220/66/11ಕೆವಿ ಕಡಕೊಳ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಟಾಟಾಮೈನ್ಸ್ ಮತ್ತು ಎಫ್-3 ಕಡಕೊಳ ಫೀಡರ್‌ಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ಕಡಕೊಳ, ಸಿಂಧುವಳ್ಳಿ, ದಡದಹಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಗಳಲ್ಲಿ ಆ ದಿನಗಳಂದು ಬೆಳಿಗ್ಗೆ 10.30 ರಿಂದ ೫ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗ ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

× Chat with us