ಬೆಂಗಳೂರು: ಇಡೀ ದೇಶದ ಗಮನ ಸೆಳೆದಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬುಧವಾರ ಭರ್ಜರಿ ಮತದಾನ ನಡೆದಿದೆ. ಅಲ್ಲಲ್ಲಿ ಇವಿಎಂಗಳಲ್ಲಿ ದೋಷ, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಯಂತಹ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಮತದಾರರು ಬಿರು ಬಿಸಿಲನ್ನೂ ಲೆಕ್ಕಿಸದೆ ಉತ್ಸಾಹದಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು. ಸಾಂವಿಧಾನಿಕ ಹಕ್ಕು ಚಲಾವಣೆಯ ಮೂಲಕ ನಾಯಕರ ಆಯ್ಕೆಯಲ್ಲಿ ತಮಗಿರುವ ಅಸ್ತ್ರವನ್ನು ಬಳಸಿಕೊಂಡರು. ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಈ ಬಾರಿ ಮತದಾನವು ಕಳೆದ ಬಾರಿಗಿಂತಲೂ ಹೆಚ್ಚಾಗಿದೆ. ಒಟ್ಟು ಮತದಾನ 72.67 % ಮತದಾನವಾಗಿದೆ. ಗರಿಷ್ಠ ಮತದಾನ ಚಿಕ್ಕಬಳ್ಳಾಪುರ- 85% , ಕನಿಷ್ಠ ಮತದಾನ ಬೆಂಗಳೂರು ಉತ್ತರ – 52% ಜಿಲ್ಲೆಗಳಲ್ಲಿ ಆಗಿದೆ.
ಗರಿಷ್ಠ ವೋಟಿಂಗ್ ಟಾಪ್ 10 ಜಿಲ್ಲೆಗಳು
1.ಚಿಕ್ಕಬಳ್ಳಾಪುರ-85.83 %
2.ರಾಮನಗರ – 84.98%
3.ಮಂಡ್ಯ – 84.36 %
4.ಬೆಂಗಳೂರು ಗ್ರಾಮಾಂತರ 83.76%
5.ತುಮಕೂರು – 83.46%
6.ಕೋಲಾರ – 81.22 %
7.ಹಾಸನ – 81.59 %
8.ಹಾವೇರಿ 81.17%
9.ಚಾಮರಾಜನಗರ – 80.81 %
10.ಚಿತ್ರದುರ್ಗ – 80.37 %
ಜಿಲ್ಲೆ – ಮತದಾನ ಪ್ರಮಾಣ (ಶೇಕಡಾವಾರು ಮತದಾನ)
58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆಯಿತು. ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ.
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…
ಮಂಡ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…
ಸಿದ್ದಾಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ…