ರಾಯಚೂರು :ಹಿಂದುಳಿದವರು, ದಲಿತರು ಕಾಂಗ್ರೆಸ್ ನಿಂದ ಈಗ ದೂರವಾಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ರಾಯಚೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ರಾಜಶಕ್ತಿ ಜನ ಶಕ್ತಿ ಯಾವಾಗ ಒಂದಾಗಿ ನಿಲ್ಲುತ್ತವೆ ಆಗ ಅಭಿವೃದ್ದಿ ಆಗುತ್ತದೆ. ಅಹಿಂದ ಅಂತ ಹೇಳಿ ಹಿಂದುಳಿವದರು, ದಲಿತರು ಈಗ ಕಾಂಗ್ರೆಸ್ ನಿಂದ ದೂರವಾಗಿದ್ದಾರೆ ಈಗ ಅಲ್ಪ ಸಂಖ್ಯಾತರು ಮಾತ್ರ ಉಳಿದಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಾಡುತ್ತೇವೆ ಎಂದಿರಿ. ಆದರೆ ಹಣ ಬಿಡುಗಡೆ ಮಾಡಲಿಲ್ಲ. ಯಡಿಯೂರಪ್ಪ ಸಿಎಂ ಆದ ಮೇಲೆ 1500 ಕೊಟಿ ಹಣ ನೀಡಿದರು. ನಾನು ಬಂದು 3000 ಕೋಟಿ ನೀಡಿದ್ದೇನೆ. ಮುಂದಿನ ಬಜೆಟ್ ನಲ್ಲಿ 5000 ಕೋಟಿ ಮೀಸಲಿಡುತ್ತೇನೆ ಎಂದರು. ನೀವು ಕಾಂಗ್ರೆಸ್ ಸೇರಿದಾಗಲೇ ಸಮಾಜವಾದವನ್ನು ಮೂಲೆಗೆ ಎಸೆದಿದ್ದೀರಿ, ಆ ಸಣ್ಣ ಹುಡುಗ ಹೇಳಿದಂತೆ ಮಾಡುತ್ತಿದ್ದೀರಿ, ಓಡು ಅಂದ್ರೆ ಓಡುತ್ತೀರಿ, ನಿಲ್ಲು ಅಂದ್ರೆ ನಿಲ್ಲುತ್ತೀರಿ ಇದು ಸ್ವಾಭಿಮಾನನಾ ಸ್ವಾಮಿ? ನಿಮ್ಮ ಸ್ಥಾನ ಎಲ್ಲಿತ್ತು, ಈಗ ಎಲ್ಲಿದ್ದೀರಿ ನೊಡಿ ಎಂದರು.
ರಾಯಚೂರು ಏರ್ ಪೋರ್ಟ್ ಗೆ ಈ ಭಾಗದ ಅಭಿವೃದ್ದಿ ಗೆ ಹಣ ಬಿಡುಗಡೆ ಮಾಡಿದ್ದೇವೆ. ರಾಯಚೂರಿಗೆ ಏಮ್ಸ್ ಸಂಸ್ಥೆ ತರುತ್ತೇವೆ. ಪ್ರಧಾನಿಯವರ ಆಶೀರ್ವಾದದಿಂದ ಏಮ್ಸ್ ರಾಯಚೂರಿಗೆ ತರುತ್ತೇವೆ.ರಾಯಚೂರು ಭಾಗದ 23 ಕೆರೆಗಳನ್ನು ತುಂಬುವ ಕೆಲಸವನ್ನು ಮಾಡೇ ಮಾಡುತ್ತೇವೆ. ಕೆರೆ ತುಂಬಿಸುವ ಯೋಜನೆಗೆ ಕಾಂಗ್ರೆಸ್ ನಾಯಕರು ಅಡ್ಡಿ ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ರೈತರ ಮನವೊಲಿಸಿ ಈ ಭಾಗಕ್ಕೆ ನೀರು ಹರಿಸುತ್ತೇವೆ ಎಂದು ಭರವಸೆ ನೀಡಿದರು.