ನಾಗಮಂಗಲ: ನಮಗೆ ಅಧಿಕಾರ ಸಿಗಲು ನಿಮ್ಮ ಆಶೀರ್ವಾದ ಬೇಕು. ನಾವು ವಿಧಾನಸೌಧಕ್ಕೆ ಹೋಗಲು ಚಲುವರಾಯಸ್ವಾಮಿಯನ್ನು ಗೆಲ್ಲಿಸಿಕೊಡಿ ಎಂದು ತಾಲ್ಲೂಕಿನ ಜನತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ತಾಲ್ಲೂಕಿನ ದೇವಲಾಪುರ ಹೋಬಳಿಯ ಕೊಂಬಿನಕೊಪ್ಪಲು ಗ್ರಾಮದಲ್ಲಿ ನಡೆದ ಅರುವಿನಮ್ಮ ಪರ ಮತ್ತು ಕನಕ ಭವನದಲ್ಲಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್.ಡಿ.ದೇವೇಗೌಡರು ಕಳೆದ ಬಾರಿ ಇಲ್ಲಿಗೆ ಬಂದು ಅತ್ತು ಚಲುವರಾಯಸ್ವಾಮಿಯನ್ನು ಸೋಲಿಸಿದ್ದಾರೆ. ಚುನಾವಣೆ ಬಂದಾಗ ಅವರು ಮತ್ತೆ ಬಂದು ಕಣ್ಣೀರು ಹಾಕುತ್ತಾರೆ. ಆದರೆ ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದರು. ಜೆಡಿಎಸ್ನವರು ಅವಕಾಶವಾದಿಗಳು, ಅವರನ್ನು ಗೆಲ್ಲಿಸುವುದರಿಂದ ಏನು ಪ್ರಯೋಜನವಿಲ್ಲ. ಚಲುವರಾಯಸ್ವಾಮಿ ಗೆದ್ದರೆ ನಾನು ಗೆದ್ದಂತೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡರ ಗೆಲುವಿಗೆ ಚಲುವರಾಯ ಸ್ವಾಮಿಯೇ ಕಾರಣ. ರಾಜ್ಯಕ್ಕೆ ಒಳ್ಳೆಯದಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಮಹಾರಾಷ್ಟ್ರ : 6.6 ಕೋಟಿ ಸಾಲ ಕೇಳಿ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ ರೈತ!
Next Article ಜೂನ್ 26 ರವರೆಗೆ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ