ಬೆಂಗಳೂರು- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು 80 ದಾಟಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಲಘುವಾಗಿ ಮಾತಾಡಹುದು. ಆದರೆ, ಎರಡು ರಾಷ್ಟ್ರೀಯ ಪಕ್ಷದವರಿಗೂ ನಮ್ಮ ಬಗ್ಗೆ ತಳಮಳ ಉಂಟಾಗಿದೆ. ಹೊರಗಡೆ ನಡೆಯುತ್ತಿರುವುದು ಬೇರೆ, ಒಳಗಡೆ ನಡೆಯೊದೇ ಬೇರೆ ಎಂದರು.
ಎರಡೂ ಪಕ್ಷದವರು ದುಡ್ಡು ಕೊಟ್ಟು ಜನರನ್ನು ಕರೆದು ತರುವುದನ್ನು ಮಾಧ್ಯಮಗಳೇ ತೋರಿಸುತ್ತಿಲ್ಲವೆ? 500 ರೂಪಾಯಿಯ ವಿಡಿಯೋ ವೈರಲ್ ಆಯ್ತು. ಏ.10 ವರೆಗೆ ನಾನು ಜನರ ಸಮೀಪಕ್ಕೆ ಹೋಗುತ್ತಿದ್ದೇನೆ. ಚುನಾವಣೆಯಲ್ಲಿ 123ರ ಗುರಿ ಸಾಸದೇ ನಾನು ನಿರಮಿಸಲ್ಲ. ಜನರ ವಿಶ್ವಾಸ ಗಳಿಸಲು ಕೊನೆಯವರೆಗೂ ಹೋರಾಟ ಮಾಡಲಾಗುವುದು. ಇಂದು ಮತ್ತು ನಾಳೆ ಯಶವಂತಪುರ ಕ್ಷೇತ್ರದಲ್ಲಿ ಪಂಚರತ್ನ ರಥ ಯಾತ್ರೆ ನಡೆಯಲಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಕಾರಣ ಸರ್ಕಾರದವರೇ. ಮತಕ್ಕಾಗಿ, ಚುನಾವಣೆಗಾಗಿ ಹೀಗೆ ಮಾಡಿದರೆ ಹೇಗೆ? ಅಮಾಯಕ ಜನರು ಬಲಿಯಾಗಿದ್ದರೆ ಯಾರು ಹೊಣೆ? ಅವರಿಗೆ ಸಂಘರ್ಷ ಆಗಬೇಕು ಅಷ್ಟೆ ಎಂದು ಆರೋಪಿಸಿದರು.
ಜೆಡಿಎಸ್ ನಿಲುವು ಸಂವಿಧಾನದ ಪರ. ಸಂವಿಧಾನದಲ್ಲಿ ಏನು ಮೀಸಲಾತಿ ಮಾರ್ಗಸೂಚಿ ಇದೆಯೋ ಅದೇ ರೀತಿ ಆಗಬೇಕು. ಸಮಾಜ ಹಾಳು ಮಾಡುವ, ಜಾತಿ ಮಧ್ಯೆ ತಂದಿಡುವ ಕೆಲಸ ಆಗಬಾರದು. ಹುಡುಗಾಟಿಕೆಯಿಂದ ಮಾಡಿರುವ ಮೀಸಲಾತಿಗೆ ನಮ್ಮ ಬೆಂಬಲ ಇಲ್ಲ ಎಂದರು.
ಹಣ ಪಡೆದು ಸರ್ಕಾರಿ ನೌಕರಿ ಕೊಡುತ್ತಿದ್ದಾರೆ. ಮೀಸಲಾತಿ ಮೇಲೆ ನೌಕರಿ ಕೊಡುತ್ತಿಲ್ಲ. ಹಾಗಾದರೆ
ಮೀಸಲಾತಿ ತಗೊಂಡು ಏನು ಮಾಡೋದು? ನಾವು ಅಕಾರಕ್ಕೆ ಬಂದರೆ ಮೀಸಲಾತಿ ತೆಗೆಯೋದು ಅಷ್ಟೆ ಅಲ್ಲ, ಹಣ ನಿಗದಿ ಮಾಡಿ ನೌಕರಿ ಕೊಡುತ್ತಿರುವುದನ್ನು ತೆಗೆದು ಹಾಕುತ್ತೇವೆ ಎಂದು ಹೇಳಿದರು.
ತಲೆ ಇಲ್ಲದೆ ಹುಚ್ಚುಚ್ಚಾಗಿ ಮಾತಾನಾಡೋರಿಗೆ ಏನು ಉತ್ತರ ಕೊಡಲಿ? ನಮಗೆ ಯಾವ ಒಪ್ಪಂದವೂ ಇಲ್ಲ. ನಾವು ನೇರ ಒಪ್ಪಂದ ಅಷ್ಟೆ. ಅವರಿಗೆ ನಾನು ಎದುರಾಳಿ ಇರಬೇಕು. ಆದರೆ ನನಗೆ ಅಲ್ಲಿ ಯಾರು ಎದುರಾಳಿ ಇಲ್ಲ ಎಂದು ಪ್ರರೋಕ್ಷವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಂಧನ ಯಾವಾಗ್ಲೋ ಆಗಬೇಕಿತ್ತು. ಸತ್ಯಾಂಶ ಏನಿದೆ ನೋಡಬೇಕಲ್ಲವೇ? ಅಡಿಕೆ ಬೆಳೆಗಾರ ಅಂತ ಹೇಳುತ್ತಿದ್ದಾರೆ. ಪ್ರತಿ ವರ್ಷ ನೂರಾರು ಕೋಟಿ ವ್ಯವಹಾರ ಮಾಡುತ್ತೇವೆ ಅಂತಾರೆ. ವ್ಯವಹಾರ ಮಾಡಿದರೂ ಅಷ್ಟು ನಗದು ಇಟ್ಟುಕೊಳ್ಳುವಂತಿಲ್ಲ. ಆದಾಯ ತೆರಿಗೆ, ಇಡಿ ಕ್ರಮ ತೆಗೆದುಕೊಳ್ಳಬೇಕಲ್ಲವೆ? ಇನ್ನೇನು ನಾಟಕ ನಡೆಯುತ್ತೆ ನೋಡೋಣ ಎಂದರು.
100ನೇ ದಿನದ ಪಂಚರತ್ನ ರಥಯಾತ್ರೆ: ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರಕಲ್ಲು ನಿಂದ ಪಂಚರತ್ನ ರಥಯಾತ್ರೆಯನ್ನು ಮತ್ತೆ ಪ್ರಾರಂಭಿಸಿದ್ದು, 100ನೇ ದಿನಕ್ಕೆ ಕಾಲಿರಿಸಲಿದೆ. ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಜವರಾಯಿಗೌಡ ಅವರೊಂದಿಗೆ ಕುಮಾರಸ್ವಾಮಿ ಅವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ನವಂಬರ್ 18ರಂದು ಕೋಲಾರದ ಮುಳಬಾಗಿಲು ಕ್ಷೇತ್ರದ ಕುರುಡುಮಲೆಯಲ್ಲಿ ಆರಂಭವಾಗಿದ್ದ ರಥಯಾತ್ರೆಯು 99 ದಿನಗಳನ್ನು ಪೂರೈಸಿತ್ತು. 88 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆಯು 10000 ಕೀ.ಮೀ.ಗೂ ಹೆಚ್ಚು ದೂರ ಕ್ರಮಿಸಿ, 5500ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಲಾಗಿತ್ತು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನವೀನ್ ಪ್ರಸಾದ್ ನನ್ನು ಬಂಧಿಸಿದ ಸಿಐಡಿ
Next Article ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ವಶಕ್ಕೆ