ಅಡಿಕೆ ತೋಟ ಮಾರಿ 1 ಕೋಟಿ ರೂ. ನೀಡಲು ಅಭಿಮಾನಿ ನಿರ್ಧಾರ
ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಅಡಿಕೆ ತೋಟ ಮಾರಿಯಾದರೂ ಒಂದು ಕೋಟಿ ರೂ. ನೀಡುವುದಾಗಿ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರು ಹೇಳುವ ಮೂಲಕ ತಮ್ಮ ಅಭಿಮಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಜತೆಗೆ ಚಿಕ್ಕಮಗಳೂರಿನಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಬಾಲಕೃಷ್ಣ ಎಂಬವರು ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಆಹ್ವಾನ ನೀಡಿದವರಾಗಿದ್ದಾರೆ. ತಮ್ಮ ಜೀವನಾಧಾರವಾಗಿರುವ ಮೂರು ಎಕರೆ ಅಡಿಕೆ ತೋಟ ವಾರಿ ಹಣ ನೀಡಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಅವರ ಅಭಿಮಾನಿಯಾಗಿರುವ ಅವರು ಕೆಂಪನ ಹಳ್ಳಿಯಲ್ಲಿರುವ ಅಡಿಕೆ ತೋಟ ಮಾರಲು ಸಿದ್ದವಾಗಿದ್ದಾರೆ. ಇದಕ್ಕೆ ಇಡೀ ಕುಟುಂಬದ ಒಪ್ಪಿಗೆ ಸಿಕ್ಕಿದೆ. ಸಿದ್ದರಾಮಯ್ಯ ಸ್ಪರ್ಧಿಸಿದರೆ ಒಂದು ಕೋಟಿಗೂ ಅಧಿಕ ಹಣ ನೀಡಿದರೂ ಯಾವುದೇ ತಕರಾರಿಲ್ಲ ಎಂದು ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ್ದಾರೆ ಎಂದು ಬಾಲಕೃಷ್ಣ ಹೇಳಿದ್ದಾರೆ.