ದೇಶದ ಜನಪ್ರಿಯ ಪ್ರಧಾನಿ ಮೋದಿ ಕುರಿತು ಸಿದ್ದರಾಮಯ್ಯ ಟೀಕೆ ಖಂಡನೀಯ: ಶಾಸಕ ಎನ್.ಮಹೇಶ್

ಕೊಳ್ಳೇಗಾಲ: ಪಟ್ಟಣದ ಭ್ರಮಾರಂಭಾ ಕಲ್ಯಾಣ ಮಂಟಪದಲ್ಲಿ ದಕ್ಷಿಣ ಪದವೀದರ ಕ್ಷೇತ್ರದ ನೋಂದಣಿ ಅಭಿಯಾನ ಹಾಗೂ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಭಿನಂದನಾ ಸಮಾರಂಭವನ್ನು ಶಾಸಕ ಎನ್. ಮಹೇಶ್ ಉದ್ಘಾಟಿಸಿದರು.

ನಂತರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಲಘುವಾಗಿ ಟೀಕಿಸಿರುವುದು ಖಂಡನೀಯ. ಮೋದಿಯವರು ಪದವೀಧರರಾಗಿದ್ದಾರೆ. ಇಡೀ ಪ್ರಪಂಚ ಮೆಚ್ಚುವಂತಹ ಕೆಲಸಗಳನ್ನು ಮಾಡಿದ್ದಾರೆ. ದೇಶದಲ್ಲಿ ೮೦ ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಕೊಡಲು ಬಹುದೊಡ್ಡ ಯೋಜನೆಯನ್ನು ತುರ್ತು ಪರಿಸ್ಥಿತಿ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದರಿಂದ ನಮ್ಮ ದೇಶದಲ್ಲಿ ಇದ್ದ ಕೊರೊನಾ ಪಿಡುಗು ಕೊನೆಗೊಳ್ಳುತ್ತಿದೆ ಎಂದರು.

ಉಪಚುನಾವಣೆ ಸಮಯದಲ್ಲಿ ಜನರಿಂದ ಚಪ್ಪಾಳೆ ಗಿಟ್ಟಿಸಲು ಪ್ರಧಾನಿಯವರನ್ನು ಟೀಕೆ ಮಾಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದರು.

× Chat with us