ಬೆಂಗಳೂರು: ನ್ಯಾಯಾಂಗ ಬಂಧನದಲ್ಲಿರುವ ರೌಡಿಶೀಟರ್ ಸ್ಯಾಂಟ್ರೊ ರವಿಯನ್ನು ಬೆಳೆಸಿದ್ದೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ಸ್ಯಾಂಟ್ರೊ ರವಿ ಜೊತೆ ಇನ್ನು ಸಾಕಷ್ಟು ಮಂದಿ ಸರ್ಕಾರದಲ್ಲಿರುವ ಸಚಿವರು ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಜ್ಞಾನೇಂದ್ರ, ಆತನನ್ನು ಬೆಳೆಸಿದ್ದೇ ಕುಮಾರಸ್ವಾಮಿ, ಈಗ ಯಾವ ನೈತಿಕತೆ ಇಟ್ಟುಕೊಂಡು ಆರೋಪ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಆತನನ್ನು ಕಾಂಗ್ರೆಸ್ನವರು ಬೆಳೆಸಿರಬಹುದು ಇಲ್ಲವೇ ಕುಮಾರಸ್ವಾಮಿ ಬೆಳೆಸಿರಬಹುದು. ಆದರೆ ನಮ್ಮ ಸರ್ಕಾರ ಸ್ಯಾಂಟ್ರೊ ರವಿಯನ್ನು ಮಟ್ಟ ಹಾಕಿ ಬಂಧನಕ್ಕೊಳಪಡಿಸಿದೆ. ಯಾರೇ ಇರಲಿ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ಯಾರನ್ನು ಕೂಡ ರಕ್ಷಣೆ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ನಮ್ಮ ಪಕ್ಷದವನ್ನಲ್ಲ ಎಂದು ಮೊದಲು ಕಾಂಗ್ರೆಸ್ಸಿಗರು ಹೇಳುತ್ತಿದ್ದರು. ಆತ ಇದೇ ಪಕ್ಷದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು ಎಂದು ಪ್ರಶ್ನೆ ಮಾಡಿದರು.
ಪಿಎಸ್ಐ ಪ್ರಕರಣದಲ್ಲಿ ಆರ್.ಡಿ. ಪಾಟೀಲ್ ಬಂಧನವಾಗಿದ್ದು, ಕಾಂಗ್ರೆಸ್ ಮುಖಂಡನಾಗಿದ್ದಾನೆ. ಈತ ನಮ್ಮವನಲ್ಲ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಲೋಕಾಯುಕ್ತಕ್ಕೆ ಬಾಗಿಲು ಹಾಕಿದವರು ಅವರು. ಅವರದ್ದೇ ಪಕ್ಷದ ರಮೇಶ್ ಕುಮಾರ್ ಅವರೇ ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಇದಕ್ಕಿಂತಲೂ ಸಾಕ್ಷಿ ಬೇಕಾ, ಅವರು ಭ್ರಷ್ಟಾಚಾರಿಗಳು ಎನ್ನುವುದಕ್ಕೆ ಎಂದು ಹೇಳಿದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಅನ್ನದಾತರ ಅಂಗಳ : ಕೃಷಿ ಮಾಹಿತಿಗಾಗಿ ರೈತರಿಗೆ ಲಭ್ಯವಿರುವ ಆ್ಯಪ್ ಗಳು
Next Article ಕವಲು ದಾರಿಯಲ್ಲಿ ತಂಬಾಕು ಬೆಳೆಗಾರ