ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ರಾಜ್ಯಕ್ಕೆ ಬರುತ್ತಿರುವುದು ಬಂದ ಪುಟ್ಟ ಹೋದ ಪುಟ್ಟ ಇದ್ದಂತೆ. ಇನ್ನು ಅವರ ಭಾರತ ಜೋಡೋ ಮತವಾಗಿ ಪರಿವರ್ತನೆಯಾಗಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗುಜರಾತ್ ಚುನಾವಣೆಯಲ್ಲಿಯೇ ಅವರು ಭಾರತ ಜೋಡೋ ಯಾತ್ರೆ ಮಾಡುತಿದ್ದರು. ಆಗಲೇ ರುಜುವಾತು ಆಗಿದೆ ಅವರ ಪರಿಣಾಮ ಏನು ಎಂದು ಟೀಕಿಸಿದರು.
ಈ ದೇಶದಲ್ಲಿ ಎಲ್ಲೆ ಚುನಾವಣೆ ನಡೆದರು ರಾಹುಲ್ ಗಾಂಧಿ ಹೋಗುತ್ತಾರೆ ಅವರು ಎಲ್ಲಲ್ಲಿ ಹೋಗಿದ್ದಾರೆ ಏನು ಆಗಿದೆ ಗೊತ್ತಿದೆ. ಕರ್ನಾಟಕದ ಜನತೆಯನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಕನ್ನಡಿಗರ ಭಾವನೆ ಅರ್ಥ ಮಾಡಿಕೊಂಡಿಲ್ಲ. ಕನ್ನಡ ಭಾಷೆ, ಜನರ ಭಾವನೆ ಏನು ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ಮೂದಲಿಸಿದರು.
ಉರಿಗೌಡ, ನಂಜೇಗೌಡ ಕುರಿತು ಕಾಂಗ್ರೆಸ್ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರ ಓಲೈಕೆಗಾಗಿ ಈ ವಿಷಯ ಪ್ರಸ್ತಾಪ ಮಾಡುತ್ತಿದೆ. ಆದ್ದರಿಂದ ಕುಮಾರಸ್ವಾಮಿ ಸಿದ್ದರಾಮಯ್ಯ ಅನಗತ್ಯವಾಗಿ ವಿವಾದ ಮಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉರಿಗೌಡ, ನಂಜೇಗೌಡ ಸ್ವಾಭಿಮಾನಗಳಾಗಿದ್ದರು. ಧರ್ಮಕ್ಕಾಗಿ ಹೋರಾಟ ಮಾಡಿದವರು ನಮ್ಮ ದೇವಸ್ಥಾನ ಉಳಿಸುವುದಾಕ್ಕಾಗಿ ಹೋರಾಟ ಮಾಡಿದವರು ಅವರ ಹೋರಾಟ ಮಾದರಿಯಾಗಿತ್ತು. ಹಿಂದುಗಳ ಕ್ರೈಸ್ತ ನರಮೇಧ ಖಂಡಿಸಿ ಹೋರಾಟ ಮಾಡಿದವರು.
ಉರಿಗೌಡ ನಂಜೇಗೌಡರ ಬಗ್ಗೆ ನಮ್ಮ ಸಮಾಜಕ್ಕೆ ಹೆಮ್ಮೆಯಿದೆ. ನಾಡಿಗೆ ದೇಶಕ್ಕೆ ಹೆಮ್ಮೆ ಇದೆ ಟಿಪ್ಪು ಸುಲ್ತಾನ್ ಮಂಗಳೂರಿನಲ್ಲಿ ಕ್ರೈಸ್ತರ ಹಾಗೂ ಕೊಡವರ ನರಮೇಧ ಕೊಡಗಿನಲ್ಲಿ ಮಾಡಿದ ಇನ್ನು ನಂದಿ ಬೆಟ್ಡದಿಂದ ಹಿಂದುಗಳನ್ನ ಕೊಂದು ಹಾಕಿದ ಕನ್ನಡ ವಿರೋಧಿಯಾಗಿದ್ದವರ ವಿರುದ್ಧ ಸೆಟೆದು ನಿಂತವವರು ನಂಜೇಗೌಡ ಉರಿಗೌಡರು ಎಂದು ಹೇಳಿದರು.
ಇದಕ್ಕೂ ಮುನ್ನ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಶೋಭಾ ಕರದ್ಲಾಂಜೆ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸ್ಥಳೀಯ ನಾಯಕರು ಹೂ ಗುಚ್ಛ ನೀಡಿ ಸ್ವಾಗತ ಕೋರಿದರು.