ರಾಜಕೀಯ

ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​

ಬೆಳಗಾವಿ : ರಮೇಶ್‌ ಜಾರಕಿಹೊಳಿ ಆಪ್ತ ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೃಥ್ವಿ ಸಿಂಗ್‌ ಗೆ ಚಾಕು ಇರಿತ ಪ್ರಕರಣ ರಾಜಕೀಯ ಪ್ರೇರಿತವೋ ಅಥವಾ ಶಡ್ಯಂತ್ರವೋ ಗೊತ್ತಾಗಬೇಕು. ಆತ ಮೋಸ್ಟ್‌ ಬೋಗಸ್‌ ಎಂದಿದ್ದಾರೆ.

ನಮ್ಮ ಕುಟುಂಬದವರೆಲ್ಲರೂ ಶಾಂತಿ ಪ್ರಿಯರು. ಎಸ್ ಪಿ ಜೊತೆ ಮಾತನಾಡಿದ್ದೇನೆ. ಚಾಕು ಇರಿತದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕಿದೆ. ಆತ ಯಾರ ಆಪ್ತ ಎನ್ನುವುದಕ್ಕಿಂತ ನಮ್ಮ ಹೆಸರು ಬಂದಿದೆ ಈ ಬಗ್ಗೆ ವಿಚಾರ ಮಾಡಿದ್ದೇನೆ. ಪೃಥ್ವಿ ಸಿಂಗ್‌ ನನ್ನೇ ವಿಚಾರಣೆ ಮಾಡಬೇಕು. ಆತನ ಹೆಸರು ಬರೆದಿಟ್ಟು ಹುಡುಗರು ಆತ್ಮಹತ್ಯೆ ಮಾಡಿಕೊಂಡಿದ್ದರು 24 ಗಂಟೆಯೊಳಗೆ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಬೇಕು ಎಂದಿದ್ದಾರೆ.

ನೆನ್ನೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಬೆಳಗಾವಿಯ ಜಯನಗರದ ನಿವಾಸದ ಬಳಿ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿತ್ತು.ಇದರಿಂದ ಪೃಥ್ವಿ ಸಿಂಗ್ ಕೈ ಮತ್ತು ಬೆನ್ನಿಗೆ ಗಾಯಗಳಾಗಿದ್ದವು

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋತರ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಆಪ್ತರಾದ ಸುಜಯ್ ಮತ್ತು ಚನ್ನರಾಜ ಅವರ ಬಾಡಿಗಾರ್ಡ್ ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪೃಥ್ವಿ ಸಿಂಗ್ ಜೊತೆ ಚನ್ನರಾಜ ಹಟ್ಟಿಹೊಳಿ ಆಪ್ತರು ಮಾತನಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

lokesh

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

3 mins ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

6 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

6 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

7 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

8 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

14 hours ago