ಮೈಸೂರು : ಸಂಸದ ಪ್ರತಾಪ್ ಸಿಂಹ ಅವರು ಸಂಖ್ಯಾ ಶಾಸ್ತ್ರದ ಪ್ರಕಾರ ತಮ್ಮ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.
ಪ್ರತಾಪ್ ಸಿಂಹ ಅವರು ತಮ್ಮ ಇಂಗ್ಲಿಷ್ ಹೆಸರಿನಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದು, Prthap simha ಬದಲಿಗೆ Pratap simmha ಎಂದು ಬದಲಿಸಿಕೊಂಡಿದ್ದಾರೆ.
ಹೆಸರು ಬದಲಾವಣೆಯ ಕುರಿತಾತ ಮಾಹಿತಿಯನ್ನು ಪ್ರತಾಪ್ ಸಿಂಹ ಅಫಿಡೆವಿಟ್ ಮೂಲಕ ಘೋಷಣೆ ಮಾಡಿದ್ದಾರೆ.
ಹಲವಾರು ಜನರು ಜೋತಿಷ್ಯ, ನಾಮಬಲ, ಸಂಖ್ಯಾ ಶಾಸ್ತ್ರವನ್ನು ನಂಬುತ್ತಾರೆ. ಕೆಲವು ರಾಜಕಾರಣೀಗಳು ಹೀಗೆ ತಮ್ಮ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಈ ಮುಂಚೆಯೂ ಕೂಡ ಕೆಲವು ರಾಜಕಾರಣಿಗಳು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೂಡ Yeddyurappa ಎಂದು ಇದ್ದ ತಮ್ಮ ಹೆಸರನ್ನು Yediyurappa ಎಂದು ಬದಲಾವಣೆ ಮಾಡಿಕೊಂಡಿದ್ದರು.
ಎಂಎಲ್‌ಸಿ ಎಚ್.ವಿಶ್ವನಾಥ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತ, ಸೇರಿದಂತೆ ಹಲವು ರಾಜಕಾರಣಿಗಳು ತಮ್ಮ ಹೆಸರಿನಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದರು. ಇದೀಗ ಆ ಸಾಲಿಗೆ ಸಂಸದ ಪ್ರತಾಪ್ ಸಿಂಹ ಕೂಡ ಸೇರಿಕೊಂಡಿದ್ದಾರೆ.
ಸಂಖ್ಯಾ ಶಾಸ್ತ್ರವು ಜ್ಯೋತಿಷ್ಯದ ಒಂದು ಪ್ರಕಾರವಾಗಿದೆ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತವಾಗಿ ಕಲೆ ಹಾಕಿದ ಅಂಕಿ ಸಂಖ್ಯೆಗಳ ಬಗ್ಗೆ ವಿಶ್ಲೇಷಣೆ ಕೊಡುವುದನ್ನು ಸಂಖ್ಯಾ ಶಾಸ್ತ್ರ ಎನ್ನಲಾಗುತ್ತದೆ.
ಪ್ರತಿಯೊಂದು ವರ್ಣಮಾಲೆಗೂ ಕೂಡ ಸಂಖ್ಯಾ ಮೌಲ್ಯವನ್ನು ನಿಗಧಿ ಪಡಿಸಲಾಗಿದೆ. ಅವುಗಳನ್ನು ಬಳಸಿಕೊಂಡು ಪದಗಳ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ.
ಸಂಖ್ಯೆಗಳು ಗ್ರಹಗಳಿಗೆ ಸಂಪರ್ಕ ಹೊಂದಿವೆ ಎನ್ನಲಾಗುತ್ತದೆ. ಪ್ರತಿಯೊಂದು ಸಂಖ್ಯೆಯೂ ಕೂಡ ಆಳುವ ಗ್ರಹವನ್ನು ಹೊಂದಿದೆ. ಅದರ ಮೂಲಕ ಗ್ರಹಗಳನ್ನು ನಿಯಂತ್ರಿಸುತ್ತದೆ. ಗ್ರಹಗಳಿಗೆ ಸಂಖ್ಯಾ ಸಂಬಂಧ ಹಾಗೂ ಸಂಪರ್ಕವು ಸಂಖ್ಯಾ ಶಾಸ್ತ್ರದ ಕೀಲಿಯಾಗಿದೆ.
ಸಂಖ್ಯಾ ಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಖ್ಯಾ ಶಾಸ್ತ್ರವು ಗ್ರೀಕ್, ಈಜಿಪ್ಟ್, ಚೀನಾ, ಬ್ಯಾಬಿಲೋನ್, ಭಾರತ ಸೇರಿದಂದಂತೆ ಅನೇಕ ನಾಗರೀಕತೆಗಳಲ್ಲಿ ಬಳಸಲ್ಪಟ್ಟಿದೆ.
ಕಳೆದ ಬಾರಿಯ ಭೀಕರ ಕಾಲ್ತುಳಿತ ಬಳಿಕ ರಂಗೇರಿದ ಕ್ರಿಕೆಟ್ ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್…
ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…
ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…
ಬಿಆರ್‌ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ…
ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ ಮರಾಠಿಯ ಮಹೇಶ ಎಲಕುಂಚವಾರ ಅವರ…