ನವದೆಹಲಿ- ಮುಂಬರುವ ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಸೇರಿದಂತೆ 115 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮುಂಬೈನ ಕೊಳೆಗೇರಿ ನಿವಾಸಿ ಲಾಲು ಪ್ರಸಾದ್ ಯಾದವ್ , ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಮತ್ತು ಪ್ರೊಫೇಸರ್ ಸೇರಿದಂತೆ ದೇಶದ ಉನ್ನತ ಸಾಂವಿಧಾನಿಕ ಹುದ್ದೆಗೆ ಹಲವಾರು ಜನಸಾಮಾನ್ಯರು ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದಾರೆ..
ಸಂಸತ್ತು ಮತ್ತು ಶಾಸಕಾಂಗ ಸಭೆಗಳ ಸದಸ್ಯರನ್ನೊಳಗೊಂಡ 50 ಅನುಮೊದಕರು ಇಲ್ಲದ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲಾಗುತ್ತದೆ.
ಆಕಾಂಕ್ಷಿಯು 15 ಸಾವಿರ ರೂಪಾಯಿ ನಗದು ರೂಪದಲ್ಲಿ ಪಾವತಿಸದಿದ್ದರೆ ಅಥವಾ ಅಂತಹ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಸರ್ಕಾರದ ಖಜಾನೆಯಲ್ಲಿ ಠೇವಣಿ ಮಾಡಿರುವ ರಸೀದಿಯನ್ನು ಪ್ರಸ್ತುತಪಡಿಸದಿದ್ದರೆ ನಾಮನಿರ್ದೇಶನವನ್ನು ತಿರಸ್ಕರಿಸಲಾಗುತ್ತದೆ.
ಇಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತಿದ್ದು, ಸಂಜೆ ವೇಳೆಗೆ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು.
ಮಹತ್ವಾಕಾಂಕ್ಷಿ ಅಭ್ಯರ್ಥಿಯು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಅಥವಾ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಕಚೇರಿಯನ್ನು ಹೊಂದಿರಬಾರದು ಎಂದ ನಿಯಮವೂ ಇದೆ.
ಪ್ರಸ್ತುತ ದ್ರೌಪದಿ ಮುರ್ಮು ಮತ್ತು ಯಶವಂತ್ ಸಿನ್ಹಾ ನಡುವೆ ಸ್ಪರ್ದೆ ನಡೆಯಲಿದ್ದು ಸೋಮವಾರದಿಂದ ಇಬ್ಬರೂ ಪ್ರಚಾರ ಆರಂಬಿಸಲಿದ್ದಾರೆ ದೇಶದುದ್ದಕ್ಕೂ ಸಂಚರಿಸಿ ಶಾಸಕರ ,ಸಂಸದರ ಮತಯಾಚಿಸಲಿದ್ದಾರೆ .ಮೇಲ್ನೋಟಕ್ಕೆ ದ್ರೌಪದಿ ಮುರ್ಮು ಮುಂಚೂಣಿಯಲಿದ್ದು ಬಿಜೆಪಿ ಮಿತ್ರಪಕ್ಷಗಳಲ್ಲದೆ ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬೆಂಬಲ ಘೋಷಿಸಿದೆ.