ಮಾಲೆ : ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಸಂಪುಟ ಸಚಿವರ ನೇಮಕಕ್ಕೆ ಅನುಮೋದನೆ ಪಡೆಯಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಸಂಸದರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.
ಕ್ರಮವಾಗಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟಗಳಾದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಪ್ರೊಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಸಂಸದರ ನಡುವೆ ಘರ್ಷಣೆ ನಡೆದಿದ್ದರಿಂದ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಅಂತರ್ಜಾಲದಲ್ಲಿ ಕಂಡು ಬರುತ್ತಿರುವ ವಿಡಿಯೊಗಳ ಪ್ರಕಾರ, ಸಂಸದರು ಪರಸ್ಪರ ಗುದ್ದಾಡಿಕೊಂಡಿದ್ದರಿಂದ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ವ್ಯಾಪಕವಾಗಿ ಹಂಚಿಕೆಯಾಗಿರುವ ಕೆಲವು ವಿಡಿಯೊ ತುಣುಕುಗಳ ಪ್ರಕಾರ, ಕೆಲವು ಸಂಸದರು ಪರಸ್ಪರ ವೇದಿಕೆಯಿಂದ ಕೆಳಗೆ ತಳ್ಳಿಕೊಂಡಿರುವ ಘಟನೆಗಳೂ ಸೆರೆಯಾಗಿವೆ.
ಈ ವಿಡಿಯೊವನ್ನು ಮಾಲ್ಡೀವ್ಸ್ ನ ಸ್ಥಳೀಯ ಸುದ್ದಿ ಸಂಸ್ಥೆಯಾದ ಅಧಂಧು ಕೂಡಾ ಹಂಚಿಕೊಂಡಿದೆ.
ಅಧಂಧು ಸುದ್ದಿ ಸಂಸ್ಥೆಯ ಪ್ರಕಾರ, ವಿರೋಧ ಪಕ್ಷಗಳ ಸಂಸದರನ್ನು ಆಡಳಿತಾರೂಢ ಪಕ್ಷದ ಸಂಸದರು ಸಂಸತ್ತನ್ನು ಪ್ರವೇಶಿಸುವುದರಿಂದ ತಡೆದಿದ್ದಾರೆ.
ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಎಂಡಿಪಿಯು, ಆಡಳಿತಾರೂಢ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝ್ಝು ಸಂಪುಟವನ್ನು ತನ್ನ ಪಕ್ಷದ ನಾಲ್ವರು ಸದಸ್ಯರು ಸೇರ್ಪಡೆಯಾಗುವುದಕ್ಕೆ ಅನುಮೋದನೆ ನೀಡದೆ ಇದ್ದುದರಿಂದ ಅವರು ಇಂತಹ ನಡೆ ಅನುಸರಿಸಿದರು ಎಂದು ಹೇಳಲಾಗಿದೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಪಿಎನ್‍ಸಿ ಮತ್ತು ಪಿಪಿಎಂ, ಎಂಡಿಪಿಯು ತನ್ನ ನಾಲ್ವರು ಸದಸ್ಯರು ಸಂಪುಟ ಸೇರ್ಪಡೆಯಾಗಲು ಅನುಮೋದನೆ ನೀಡದಿರುವ ನಡೆಯಿಂದ ಜನರಿಗೆ ಸೇವೆ ಒದಗಿಸಲು ತೊಂದರೆ ಉಂಟಾಗಿದೆ ಎಂದು ಹೇಳಿವೆ.
ಸಂಸತ್ತಿನೊಳಗಿನ ಚಿತ್ರೀಕರಿಸಿರುವ ವಿಡಿಯೊಗಳಲ್ಲಿ ಸಂಸದರು ಪರಸ್ಪರ ನೆಲದ ಮೇಲೆ ಗುದ್ದಾಡುತ್ತಿರುವುದು ಹಾಗೂ ಓರ್ವ ಸಂಸದನ ಕೂದಲನ್ನು ಕೀಳುತ್ತಿರುವುದೂ ಸೆರೆಯಾಗಿದೆ.
ಕೂದಲು ಕೀಳಲ್ಪಟ್ಟ ಸಂಸದನು ಸಭಾಧ್ಯಕ್ಷರು ಸಂಸತ್ತನ್ನು ಉದ್ದೇಶಿಸಿ ಮಾತನಾಡದಂತೆ ತಡೆ ಒಡ್ಡಲು ತುತ್ತೂರಿಯಂಥ ವಾದನವನ್ನು ಊದುತ್ತಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…