ಕೋಝಿಕ್ಕೋಡ್ (ಕೇರಳ): ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಸರ್ಕಾರಿ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸೋಂಕಿನಿಂದ ಸುಮಾರು 1,800 ಕೋಳಿಗಳು ಸಾವಿಗೀಡಾಗಿವೆ.
ಇಲ್ಲಿನ ಪಂಚಾಯಿತಿ ನಿರ್ವಹಿಸುತ್ತಿರುವ ಸ್ಥಳೀಯ ಫಾರ್ಮ್ನಲ್ಲಿರುವ ಕೋಳಿಗಳಲ್ಲಿ ಹೆಚ್ಚುವರಿ ಪ್ರಸರಣ ಸಾಮರ್ಥ್ಯವನ್ನು ಹೊಂದಿರುವ ಎಚ್ಎ5ನ್1 ರೂಪಾಂತರದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿಗಳು ಮತ್ತು ನಿಯಮ ಪ್ರಕಾರ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಕೇರಳದ ಪಶುಸಂಗೋಪನೆ ಸಚಿವರಾದ ಜೆ. ಚಿಂಚುರಾಣಿ ಅವರು ಸೂಚನೆ ನೀಡಿದ್ದಾರೆ.
ಆರಂಭಿಕ ಪರೀಕ್ಷೆಯಲ್ಲಿ ಹಕ್ಕಿ ಜ್ವರ ಎಂದು ಗೊತ್ತಾಗಿದೆ ಆದರೂ ಸತ್ತ ಕೋಳಿಯ ಮಾದರಿಗಳನ್ನು ಭೋಪಾಲ್ (ಮಧ್ಯಪ್ರದೇಶ)ನಲ್ಲಿರುವ ಹೈ ಸೆಕ್ಯುರಿಟಿ ಲ್ಯಾಬ್ಗೆ ನಿಖರವಾದ ರೋಗ ಪತ್ತೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಫಾರ್ಮ್ನಲ್ಲಿ 5,000ಕ್ಕೂ ಹೆಚ್ಚು ಕೋಳಿಗಳಿದ್ದು, ಅವುಗಳಲ್ಲಿ 1,800 ಸೋಂಕಿನಿಂದ ಇದುವರೆಗೆ ಸಾವಿಗೀಡಾಗಿವೆ. ಮುಂದಿನ ಕಾರ್ಯವಿಧಾನಗಳ ಅನ್ವಯ ಜಿಲ್ಲೆಯ ಅಧಿಕಾರಿಗಳು ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯದೊಂದಿಗೆ ವಿವಿಧ ಫಾರಂಗಳಿಗೆ ಭೇಟಿ ನೀಡಿ ಕಾರ್ಯಾಚರಣೆ ಆರಂಭಿಸಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಕೋಲಾರದಿಂದಲೂ ಸಿದ್ದರಾಮಯ್ಯ ಓಡುವುದು ನಿಶ್ಚಿತ: ಆರ್.ಅಶೋಕ್
Next Article ಕಾಂಗ್ರೆಸ್ಸಿಗರು ‘ಸ್ಯಾಂಟ್ರೋ’ ಮಹಾಪೋಷಕರು: BJP