ನವ್ಸಾರಿ : ವಿದ್ಯಾರ್ಥಿಗಳ ಪ್ರತಿಭಟನೆಯೊಂದರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹರಿದು ಹಾಕಿದ್ದ ಐದು ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್ ಅವರಿಗೆ ಅಲ್ಲಿನ ನವ್ಸಾರಿ ನ್ಯಾಯಾಲಯ 99 ರೂ ದಂಡ ವಿಧಿಸಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಕೊಠಡಿಗೆ ಪ್ರವೇಶಿಸಿದ್ದ ಹಾಗೂ ಪ್ರಧಾನಿ ಮೋದಿ ಅವರ ಫೋಟೋ ಹರಿದ ಆರೋಪ ಅವರ ಮೇಲಿದೆ.
ಅಕ್ರಮ ಪ್ರವೇಶ ಅಪರಾಧಕ್ಕಾಗಿ ಐಪಿಸಿ ಸೆಕ್ಷನ್ 447ರ ಅಡಿ ಅನಂತ್ ಪಟೇಲ್ ಅವರು ತಪ್ಪಿತಸ್ಥ ಎಂದು ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಎ ಧಧಾಲ್ ಅವರು ಪ್ರಕಟಿಸಿದರು. ಪಟೇಲ್ ಅವರು ವನ್ಸದಾ (ಪರಿಶಿಷ್ಟ ಜಾತಿ) ಕ್ಷೇತ್ರದಿಂದ ಶಾಸಕರಾಗಿದ್ದಾರೆ.
ಒಟ್ಟು ಏಳು ಮಂದಿ ವಿರುದ್ಧ ಪ್ರಕರಣ
ಪಟೇಲ್ ಮತ್ತು ಯುವ ಕಾಂಗ್ರೆಸ್ ಸದಸ್ಯರು ಸೇರಿದಂತೆ ಆರು ಇತರರ ವಿರುದ್ಧ 2017ರ ಮೇ ತಿಂಗಳಲ್ಲಿ ಜಲಾಲ್ಪೋರ್ ಪೊಲೀಸರು ಐಪಿಸಿ ಸೆಕ್ಷನ್ಗಳಾದ 143 (ಕಾನೂನುಬಾಹಿರವಾಗಿ ಗುಂಪುಗೂಡುವಿಕೆ), 353 (ಹಲ್ಲೆ), 427 (50 ರೂಪಾಯಿಗಿಂತ ಅಧಿಕ ನಷ್ಟಕ್ಕೆ ಕಾರಣವಾಗುವ ದುರ್ವರ್ತನೆ), 447 (ಅಕ್ರಮ ಪ್ರವೇಶ) ಮತ್ತು 504ರ (ಉದ್ದೇಶಪೂರ್ವಕ ಅವಮಾನ) ಅಡಿ ಪ್ರಕರಣಗಳನ್ನು ದಾಖಲಿಸಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ನವ್ಸಾರಿ ಕೃಷಿ ವಿವಿಯ ಉಪ ಕುಲಪತಿ ಕಚೇರಿಗೆ ಅನುಮತಿ ಇಲ್ಲದೆ ಪ್ರವೇಶಿಸಿದ್ದ ಪಟೇಲ್ ಹಾಗೂ ಇತರೆ ಆರೋಪಿಗಳು, ಅನುಚಿತ ರೀತಿಯಲ್ಲಿ ವರ್ತಿಸಿದ್ದರು. ವಿಸಿ ಅವರ ಟೇಬಲ್ ಮೇಲೆ ಇರಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಹರಿದುಹಾಕಿದ್ದರು ಎಂದು ಆರೋಪಿಸಲಾಗಿತ್ತು.
ಮೂವರು ತಪ್ಪಿತಸ್ಥರು
ಅಕ್ರಮ ಪ್ರವೇಶ ಆರೋಪದಲ್ಲಿ ಮೂವರು ತಪ್ಪಿತಸ್ಥರು ಎಂದು ನ್ಯಾಯಾಲಯ ಪರಿಗಣಿಸಿದೆ. ಅವರಿಗೆ 99 ರೂ ದಂಡದ ಮೊತ್ತ ಠೇವಣಿ ಇರಿಸುವಂತೆ ಆದೇಶಿಸಿದೆ. ಇದರಲ್ಲಿ ಅವರು ತಪ್ಪಿದ್ದಲ್ಲಿ ಏಳು ದಿನಗಳ ಕಾಲ ಸಾದಾ ಸಜೆ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅನಂತ್ ಪಟೇಲ್ ಅವರಿಗೆ ಐಪಿಸಿ ಸೆಕ್ಷನ್ 447ರ ಅಡಿಯಲ್ಲಿ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು. ಇದರ ಪ್ರಕಾರ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ 500 ರೂ ದಂಡ ವಿಧಿಸಬಹುದಾಗಿದೆ.ಆದರೆ, ಈ ಎಫ್ಐಆರ್ ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ. ಆರೋಪಿಯು ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯನಾಗಿರುವ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲು ಈ ಪ್ರಕರಣ ದಾಖಲಿಸಲಾಗಿದೆ ಎಂದು ಅನಂತ್ ಪಟೇಲ್ ಪರ ವಕೀಲರು ವಾದಿಸಿದ್ದರು.ರಾಹುಲ್ ಗಾಂಧಿ ಅವರ ಅನರ್ಹತೆ ನಿರ್ಧಾರದ ವಿರುದ್ಧ ಸೋಮವಾರ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ನ 16 ಮಂದಿ ಶಾಸಕರನ್ನು ಅಮಾನತು ಮಾಡಲಾಗಿದೆ. ಗುಜರಾತ್ ವಿಧಾನಸಭೆಯಲ್ಲಿ 17 ಕಾಂಗ್ರೆಸ್ ಶಾಸಕರಿದ್ದು, ಅನಂತ್ ಪಟೇಲ್ ಒಬ್ಬರು ಕಲಾಪಕ್ಕೆ ಹಾಜರಾಗದೆ ಇದ್ದಿದ್ದರಿಂದ ಅಮಾನತು ಶಿಕ್ಷೆಯಿಂದ ಪಾರಾಗಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಮತದಾರರಿಗೆ ಆಮಿಷ : ನಗದು,ಕುಕ್ಕರ್,ಹೆಲ್ಮೆಟ್,ದಿನಸಿ ಕಿಟ್ಗಳ ಜಪ್ತಿ