ಚುನಾವಣಾ ಆಯೋಗ ಆಡಳಿತಾರೂಢ ಪಕ್ಷಕ್ಕೆ ನೆರವಾಗುತ್ತಿದೆಯೇ?

ಸಂಪಾದಕೀಯ

 

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ದೇಶದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ ಅಪ್ಪಳಿಸುವ ಸಮಯದಲ್ಲಿ ಚುನಾವಣೆಗಳನ್ನು ಘೋಷಿಸಿರುವುದು ಅಚ್ಚರಿ ಮೂಡಿಸಿದೆ.

 

ತಜ್ಞರ ಪ್ರಕಾರ ಜನವರಿ ಅಂತ್ಯದೊಳಗೆ ಮೂರನೇ ಅಲೆ ಗರಿಷ್ಠಮಟ್ಟಕ್ಕೆ ಮುಟ್ಟಲಿದ್ದು ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಬಹುದು. ಚುನಾವಣಾ ಆಯೋಗ ಏಪ್ರಿಲ್- ಮೇ ತಿಂಗಳಲ್ಲಿ ಚುನಾವಣೆ ನಡೆಸಬಹುದಿತ್ತು. ಆಯಾ ವಿಧಾನಸಭೆಗಳ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆಸಬೇಕೆಂಬ ನಿಯಮಗಳಿವೆ. ಆ ನಿಯಮಗಳನ್ನು ಚುನಾವಣಾ ಆೋಂಗ ಪಾಲಿಸಿದೆ. ಆದರೆ, ತುರ್ತು ಸಂದರ್ಭಗಳಲ್ಲಿ ಚುನಾವಣೆಗಳನ್ನು ಮುಂದೂಡುವ ಅವಕಾಶವನ್ನು ಕಾನೂನಿನಲ್ಲಿ ಕಲ್ಪಿಸಲಾಗಿದೆ. ಚುನಾವಣಾ ಆೋಂಗಕ್ಕೆ ಕೋವಿಡ್ ಮೂರನೇ ಅಲೆಯು ತುರ್ತು ಸಂದರ್ಭ ಅನಿಸಿಲ್ಲ ಎಂದಾದರೆ, ಎರಡನೇ ಅಲೆಯಲ್ಲಾದ ಅನಾಹುತಗಳ ಮಾಹಿತಿ ಆೋಂಗಕ್ಕೆ ಇಲ್ಲವೆಂದೇ ಭಾವಿಸಬೇಕಾದೀತು.

 

 

ಚುನಾವಣಾ ವೇಳಾಪಟ್ಟಿಯನ್ನು ಗಮನಿಸಿದರೆ, ಆಡಳಿತಾರೂಢ ಪಕ್ಷಕ್ಕೆ ನೆರವಾಗುವ ರೀತಿಯಲ್ಲಿ ರೂಪಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನೂ ಎಂಟು ಹಂತಗಳಲ್ಲಿ ನಡೆಸಲಾಗಿತ್ತು. ಕಾನೂನು ಸುವ್ಯವಸ್ಥೆಯ ಕಾರಣವನ್ನು ಆಗ ಮುಂದಡ್ಡಲಾಗಿತ್ತು. ಆದರೆ, ವಾಸ್ತವಿಕ ಪ್ರತಿಪಕ್ಷಗಳು ಆರೋಪ ಮಾಡಿದಂತೆ, ಪ್ರಧಾನಿಗಳು ಹೆಚ್ಚೆಚ್ಚು ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡಲು ಅನುಕೂಲ ಮಾಡಿಕೊಡುವ ಸಲುವಾಗಿಯೇ ಎಂಟು ಹಂತಗಳಲ್ಲಿ ಆೋಂಜಿಸಲಾಗಿತ್ತು. ಅದಕ್ಕೆ ಪುಷ್ಠಿ ಕೊಡುವಂತೆ ಪ್ರಧಾನಿಗಳು ಚುನಾವಣಾ ಅವಧಿಯಲ್ಲಿ ಹದಿನೇಳು ಬಾರಿ ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿ ಪ್ರತಿ ಭೇಟಿಯಲ್ಲೂ ಮೂರರಿಂದ ನಾಲ್ಕು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಸ್ವತಂತ್ರ್ಯೋತ್ತರ ಭಾರತದಲ್ಲಿ ಪ್ರಧಾನಿೊಂಬ್ಬರು ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಅಷ್ಟೊಂದು ಬಾರಿ ಭೇಟಿ ನೀಡಿದ ಉದಾಹರಣೆಗಳಿಲ್ಲ.  ಅಷ್ಟಾದರೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮರಳಿ ಅಧಿಕಾರಕ್ಕೇರಿತು ಎಂಬುದು ಬೇರೆ ಮಾತು.

ಈಗ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ನಿಜ, ಉತ್ತರ ಪ್ರದೇಶ ೪೧೯ ವಿಧನಸಭಾ ಕ್ಷೇತ್ರಗಳಿರುವ ರಾಜ್ಯ.  ಸಿಬ್ಬಂದಿ ನಿೋಂಜನೆ ಮತ್ತಿತರ ಕಾರಣಗಳಿಗಾಗಿ ಹೆಚ್ಚಿನ ಹಂತಗಳಲ್ಲಿ ಅಲ್ಲಿ ಚುನಾವಣೆ ನಡೆಯುತ್ತದೆ.  ಆದರೆ, ಈ ಬಾರಿ ಚುನಾವಣಾ ವೇಳಾಪಟ್ಟಿ ಮತ್ತು ಚುನಾವಣಾ ಹಂತಗಳನ್ನು ನಿಗದಿ ಮಾಡುವುದರರಲ್ಲಿ ಪ್ರಧಾನಿ ಕಾರ್ಯಾಲಯದ ಹಸ್ತಕ್ಷೇಪ ಇದೆ ಎನ್ನಲಾಗುತ್ತಿದೆ. ಇಂತಹ ಆರೋಪಗಳು ಹಿಂದೆಂದೂ ಪ್ರಧಾನಿ ಕಾರ್ಯಾಲಯದ ಮೇಲೆ ಬಂದಿರಲಿಲ್ಲ. ಪ್ರಧಾನಿ ಕಾರ್ಯಾಲಯದ  ಅಧಿಕಾರಿಗಳು ಮತ್ತು ಚುನಾವಣಾ ಆೋಂಗದ ಅಧಿಕಾರಿಗಳ ಸಭೆಯೊಂದು ನಡೆದಿತ್ತು. ಪ್ರಧಾನ ಮಂತ್ರಿಗಳ ಕಾರ್ಯಾಲಯವು ಈ ರೀತಿ ಸಭೆ ಆೋಂಜಿಸಿದ್ದ ಔಚಿತ್ಯ ಪ್ರಶ್ನಿಸಿದ್ದ ಪ್ರತಿಪಕ್ಷಗಳು  ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಆ ಹಂತದಲ್ಲಿ ಮುಖ್ಯ ಚುನಾವಣಾ ಆಯುಕ್ತರು, ಚನಾವಣಾ ಆಯುಕ್ತರು ಸಭೆ ಕರೆದಿರುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರಾದರೂ ನಂತರ ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದೂ ಕೂಡ ಅನೌಚಿತ್ಯ.

 

೨೦೨೪ರ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಸೆಮಿಫೈನಲ್ ಇದ್ದಂತೆ. ೮೦ ಲೋಕಸಭಾ ಸದಸ್ಯರನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಹೆಚ್ಚೆಚ್ಚು ಸ್ಥಾನಗಳನ್ನು ಗೆದ್ದಷ್ಟು ಅಧಿಕಾರ ಗ್ರಹಿಸಲು ಸಲೀಸಾಗುತ್ತದೆ. ಆ ಕಾರಣಕ್ಕಾಗಿಯೇ ಉತ್ತರ ಪ್ರದೇಶ ಚುನಾವಣೆಯನ್ನು ಆಡಳಿತಾರೂಢ ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಪ್ರಧಾನಿ ಮೋದಿ ಇಡೀ ರಾಜ್ಯವ್ಯಾಪಿ ಚುನಾವಣಾ ಪ್ರಚಾರ ಮಾಡಲು ಸಲೀಸಾಗುವಂತೆ ಹಂತಗಳನ್ನು ರೂಪಿಸಲಾಗಿದೆ ಎಂಬುದು ಚುನಾವಣಾ ಆೋಂಗದ ಮೇಲಿರುವ ಆರೋಪ. ಮೇಲ್ನೋಟಕ್ಕೆ ಇಲ್ಲಿ ಚುನಾವಣಾ ಆೋಂಗದಿಂದ ತಪ್ಪಾಗಲೀ, ಅಥವಾ ನಿಯಮ ಉಲ್ಲಂಘನೆಯಾಗಲೀ ಆಗಿಲ್ಲ. ಆದರೆ, ಚುನಾವಣಾ ಆೋಂಗ ಪಕ್ಷಾತೀತವಾಗಿ, ಸ್ವಯತ್ತವಾಗಿ ಕಾರ್ಯ ನಿರ್ವಹಿಸುವ ತನ್ನ  ಸಾಂವಿಧಾನಿಕ ಹಕ್ಕನ್ನು ಕಾಪಾಡಿಕೊಂಡಿದೆಯೇ ಎಂಬುದು ನೈತಿಕ ಪ್ರಶ್ನೆ.

 

ಈಗ ಕೋವಿಡ್ ಮೂರನೇ ಅಲೆ ಅಪ್ಪಳಿಸುತ್ತಿದೆ. ಜನವರಿ ೧೫ರವರೆಗೆ ಮಾತ್ರ ಬಹಿರಂಗ ಪ್ರಚಾರಕ್ಕೆ ಚುನಾವಣಾ ಆೋಂಗ ನಿರ್ಬಂಧ ಹೇರಿದೆ. ನಂತರ ಚುನಾವಣಾ ಪ್ರಚಾರ ಮಾಡುವ ರಾಜಕೀಯ ಪಕ್ಷಗಳು ಕೋವಿಡ್ ನಿಮಯಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಮುಖ್ಯವಾಗಿ ಪ್ರಧಾನಿಗಳು ಕೋವಿಡ್ ನಿಯಮಾವಳಿಗಳ ಪಾಲನೆಯಲ್ಲಿ ದೇಶದ ಜನರಿಗೆ ಮಾದರಿಯಾಗಬೇಕಿದೆ.

× Chat with us