ಚೆನ್ನೈ : ಎಐಎಡಿಎಂಕೆ ಯ ಸರ್ವೋಚ್ಛ ನಾಯಕನನ್ನಾಗಿ ಯಡಪ್ಪಾಡಿ ಪಳನಿಸ್ವಾಮಿ ಅವರನ್ನು ಇಂದು ನೇಮಕ ಮಾಡಲಾಗಿದೆ. ಚೆನ್ನೆನಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಇತರ 23 ನಿರ್ಣಯಗಳನ್ನು ಬದಿಗೆಸರಿಸಿ ನಾಯಕತ್ವ ಅಂಗೀಕಾರದ ಏಕಮಾತ್ರ ನಿರ್ಣಯವನ್ನು ಮಂಡಿಸಲಾಯಿತು.
ಇದಕ್ಕೆ ಸರ್ವಾನುಮತದ ಬೆಂಬಲವಿದೆ ಎಂದು ರಾಜ್ಯಸಭಾ ಸದಸ್ಯ ಸಿ.ವಿ.ಷಣ್ಮುಗಂ ಘೋಷಿಸಿದರು.
ಪಕ್ಷದ ಉಪಕಾರ್ಯದರ್ಶಿ ಕೆ.ಪಿ.ಮುನಿಸ್ವಾಮಿ ಅವರು ಪಕ್ಷ ಸಂಘಟನಾತ್ಮಕ ದೃಷ್ಟಿಯಿಂದ ಸಾಮಾನ್ಯ ಸಭೆ ನಿರ್ಣಯ ತೆಗೆದುಕೊಂಡಿದ್ದಾರೆ.
ಎಐಎಡಿಎಂಕೆಯ ಸಂಯೋಜಕರಾಗಿದ್ದ ಪನೀರ್ ಸೆಲ್ವಂ ಅವರು ನಿರ್ಣಯವನ್ನು ವಿರೋಸಿ ಸಭಾತ್ಯಾಗ ಮಾಡಿದ್ದಾರೆ. ಇತ್ತ ಪಳನಿಸ್ವಾಮಿಯವರ ಬೆಂಬಲಿಗರು ಜಯಘೋಷಗಳನ್ನು ಮೊಳಗಿಸಿದ್ದಾರೆ.