ರಾಯಚೂರು: ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ ಐದು ಸೀಟು ಗೆದ್ದು ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜಾ.ದಳ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲೆಸೆದರು.
ಮಿಟ್ಟಿ ಮಲ್ಕಾಪುರ ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್ ಮತ್ತು ಸುಳ್ಳಿನ ರಾಮಯ್ಯನವರಿಗೆ ಹೇಳುತ್ತೇನೆ. ಈ ಚುನಾವಣೆ ನಂತರ ಜಾ.ದಳ ದೇಶದಲ್ಲಿ ಬೆಳಗಲಿದೆ. ಜನ ತಿರುಗಿ ನೋಡುವಂತೆ ಮಾಡುವೆ ಎಂದರು.
ನಮ್ಮ ಬಗ್ಗೆ ಲಘುವಾಗಿ ಮಾತನಾಡಿ ಇರುವ ಸೀಟು ಕಳೆದುಕೊಳ್ಳುತ್ತೀರಿ. ನನ್ನ ಟೀಕೆ ಮಾಡಿದಷ್ಟು ನಿಮಗೆ ಹಾನಿ. 123 ಸ್ಥಾನದ ಗುರಿ ಮುಟ್ಟುವೆ. ರಾಯಚೂರಿನಲ್ಲಿ ಐದರಿಂದ ಆರು ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರಿಗೆ ಇದು ಕೊನೆ ಚುನಾವಣೆ ಎಂಬ ಅವರ ಮಗ ಡಾಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಸರಿಯಿದೆ. ಕೋಲಾರದಲ್ಲಿ ನಿಂತರೆ ಇದೇ ಕೊನೆ ಚುನಾವಣೆಯಾಗಲಿದೆ. ಕಾಂಗ್ರೆಸ್ ಬಿಜೆಪಿಯವರು ಮೊದಲ ಪಟ್ಟಿ ಬಿಡುಗಡೆ ಮುನ್ನವೇ ನಾನು ನಮ್ಮ ಪಕ್ಷದಿಂದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವೆ ಎಂದರು.
ಕಾಂಗ್ರೆಸ್ನವರ ಪ್ರಜಾಧ್ವನಿಯಲ್ಲಿ ಕುಮಾರಸ್ವಾಮಿ ಭಜನೆ ಮಾಡುತ್ತಿದ್ದು, ಅದು ಕುಮಾರಧ್ವನಿಯಾಗಿದೆ. ಸಾಲಮನ್ನಾ ಮಾಡಿದ್ದನ್ನು ರೈತರು ಈಗ ನೆನೆಯುತ್ತಿದ್ದಾರೆ. ಜಾ.ದಳ ಪಕ್ಷ ಅಧಿಕಾರಕ್ಕೆ ಬಂದರೆ ತಾವು ಉಳಿಯುತ್ತೇವೆ ಎಂಬುವುದು ರೈತರಿಗೆ ಗೊತ್ತಾಗಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಎಲ್ಇ ಸೊಸೈಟಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ರಾಜ್ಯಕ್ಕೆ ಯಾವುದೇ ಕೊಡುಗೆ ತಂದಿಲ್ಲ. ಮಹದಾಯಿ ಯೋ]ಜನೆ ಏನಾಗಿದೆ. ಟೆಂಡರ್ ಕರೆಯುವುದಾಗಿ ಹೇಳಿದ್ದರು. ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ ಎಂದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಕೌದಳ್ಳಿಯಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ