ರಾಜಕೀಯ

ಅಮಿತ್‌ ಶಾ ಚುನಾವಣೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ: ಕೆ.ಎಸ್‌ ಈಶ್ವರಪ್ಪ

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೂರವಾಣಿ ಕರೆ ಮಾಡಿ ಚುನಾವಣೆಯಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಬುಧವಾರ ದಿಲ್ಲಿಗೆ ಬರುವಂತೆ ಹೇಳಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ತಿಳಿಸಿದರು.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮಿತ್‌ ಶಾ ಅವರು ಕರೆ ಮಾಡಿ ಪಕ್ಷದ ಹಿರಿಯರಿದ್ದೀರಿ, ನೀವು ಸ್ಪರ್ಧೆ ಮಾಡುವುದು ಆಶ್ಚರ್ಯ ತಂದಿದೆ ಎಂದರು. ಅದಕ್ಕೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಮೋದಿಯವರು ಕುಟುಂಬ ರಾಜಕಾರಣ ಇಷ್ಟಪಡಲ್ಲ, ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ಉಸ್ತುವಾರಿಯೇ ಒಂದು ಕುಟುಬಂದ ಕೈಯಲ್ಲಿದೆ. ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷ ಹೋಗಿರುವುದು ತುಂಬಾ ಅನ್ಯಾಯ, ಇದರಿಂದ ಪಕ್ಷದ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ ಎಂದು ತಿಳಿಸಿದ್ದೇನೆ ಎಂದರು.

ನಾಳೆಯೇ ಪಕ್ಷದ ರಾಜ್ಯಧ್ಯಕ್ಷರನ್ನು ಬದಲಾವಣೆ ಮಾಡಿ ಚುನಾವಣೆ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದೀನಿ ಎಂದು ಈಶ್ವರಪ್ಪ ಹೇಳಿದರು

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಪ್ರವಾಸಿ ಮಹಿಳೆ ನಾಪತ್ತೆ

ಮಡಿಕೇರಿಗೆ ಬಂದಿದ್ದ ಕೇರಳ ಮೂಲದ ಟ್ರೆಕ್ಕರ್ ಮಡಿಕೇರಿ: ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಚಾರಣಕ್ಕೆ ತೆರಳಿದ್ದಾಗ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ…

52 mins ago

ಓದುಗರ ಪತ್ರ: ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯಿತಿ

ಸೌಲಭ್ಯ ಮತ್ತೆ ಮುಂದುವರಿಯಲಿ ಕಳೆದ ಆರ್ಥಿಕ ವರ್ಷದಲ್ಲಿ (೨೦೨೫-೨೬), ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರೂ.೪೪೯.೧೩ ಕೋಟಿ ರೂಪಾಯಿಗೂ ಹೆಚ್ಚು…

57 mins ago

ಓದುಗರ ಪತ್ರ: ಮರುಪರಿಶೀಲನೆ ಅತ್ಯಗತ್ಯ

ಇತ್ತೀಚಿನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ( ಎಫ್. ಸಿ. ಆರ್. ಎ) ತಿದ್ದುಪಡಿಗಳು ಕೇವಲ ನಿಯಮಗಳಲ್ಲ, ಅವು ದಶಕಗಳಿಂದ…

59 mins ago

ಬಸ್‌ನಲ್ಲಿ ಚಿನ್ನಾಭರಣ ಕಳವು

೧೮ ಲಕ್ಷ ರೂ. ಮೌಲ್ಯದ ಒಡವೆಗಳ ಅಪಹರಣ ಮೈಸೂರು: ನಗರ ಸಾರಿಗೆ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿದ್ದ ಸುಮಾರು ೧೮…

1 hour ago

ಮೈಸೂರು ಡಿಸಿ ಬಂಧನಕ್ಕೆ ವಾರಂಟ್

ಪಾಲನೆಯಾಗದ ಕೋರ್ಟ್ ಆದೇಶ: ಡಿಸಿಗೆ ನೋಟಿಸ್ ಮೈಸೂರು: ಭೂ ವ್ಯಾಜ್ಯ ಪ್ರಕರಣವೊಂದಕ್ಕೆ ಸಂಬಂಽಸಿದಂತೆ ನ್ಯಾಯಾಯದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ…

1 hour ago