ಬ್ಯಾರಿಕೇಡ್‌ ಮುರಿದು ದೆಹಲಿ ಪ್ರವೇಶಿಸಿದ ರೈತರು: ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್‌, ಅಶ್ರುವಾಯು

ಹೊಸದಿಲ್ಲಿ: ಪೊಲೀಸರ ಮನವರಿಕೆಗೂ ಬಗ್ಗದೇ ರೈತರು ಗಡಿಭಾಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿ ಪ್ರವೇಶಿಸಿದರು. ಗಡಿಭಾಗಗಳಲ್ಲಿ ಅವ್ಯವಸ್ಥೆಗೆ ಕಾರಣವಾಗುತ್ತಿದ್ದಂತೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಅಲ್ಲದೇ, ಅಶ್ರುವಾಯುವನ್ನು ಸಿಡಿಸಿದರು.

ದೇಶದಲ್ಲಿ 72ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ರೈತರು ʻಕಿಸನ್‌ ಪರೇಡ್‌ʼ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸುತ್ತಿದ್ದಾರೆ. ಆ ಮೂಲಕ ಕೃಷಿ ಕಾನೂನಗಳಿಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದಲೇ ಟ್ರ್ಯಾಕ್ಟರ್‌ ರ‍್ಯಾಲಿ ಆರಂಭಿಸಿದರು.

ಹೊಸದಿಲ್ಲಿ ಬಡಿಭಾಗ ಕರ್ನಲ್‌ ಬಳಿ ಪೊಲೀಸ್‌ ಬ್ಯಾರಿಕೇಡ್‌ಗಳನ್ನು ಮುರಿದು ರೈತರು ದೆಹಲಿ ಪ್ರವೇಶಿಸಿದರು.

ಪ್ರತಿಭಟನಾಕಾರರನ್ನು ತಡೆಯಲು ಮುಂದಾದ ಕೆಲವರು ಪೊಲೀಸರಿಗೂ ಗಾಯಗಳಾಗಿವೆ.
ಸಿಂಗು ಗಡಿಯಲ್ಲಿ ಗದ್ದಲ ಉಂಟಾಗಿದೆ. ಈ ಗಡಿ ದೆಹಲಿ ಮತ್ತು ಹರಿಯಾಣವನ್ನು ವಿಭಜಿಸುತ್ತದೆ. ನವೆಂಬರ್ ಅಂತ್ಯದಲ್ಲಿ ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ಪ್ರಾರಂಭವಾದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಕೇಂದ್ರಬಿಂದುವಾಗಿದೆ. ಇಂದು ಬೆಳಿಗ್ಗೆ 5,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಿಂಗ್ ಗಡಿ ಬಳಿ ಜಮಾಯಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ರೈತರು ರಾಷ್ಟ್ರ ಧ್ವಜವನ್ನು ಹಿಡಿದು ಕೃಷಿ ಕಾನೂನುಗಳ ವಿರುದ್ಧ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸುತ್ತಿದ್ದಾರೆ.

‘ಕಿಸಾನ್ ಗಣತಂತ್ರ ಮೆರವಣಿಗೆ‘ಯ ಹಿನ್ನೆಲೆಯಲ್ಲಿ ಮಂಗಳವಾರ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿ ಭಾಗಗಳಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.