ದಂಡ ಹಾಕಲು ಹಿಡಿದ ಪೊಲೀಸ್‌: ಲಾರಿ ಹರಿದು ಬೈಕ್‌ ಸವಾರ ಸಾವು, ಪೊಲೀಸರಿಗೆ ಥಳಿತ

ಮೈಸೂರು: ದಂಡ ಹಾಕುವಾಗ ನಿಲ್ಲಿಸದ ಬೈಕ್‌ ಸವಾರನಿಗೆ ಸಂಚಾರ ಪೊಲೀಸರು ಲಾಠಿಯಲ್ಲಿ ಹೊಡೆದ ಪರಿಣಾಮ ಬೈಕ್‌ ಸವಾರ ಕೆಳಗೆ ಬಿದ್ದು ಹಿಂಬದಿಯಿಂದ ಲಾರಿ ಹರಿದು ಸಾವಿಗೀಡಾಗಿರುವ ಘಟನೆ ನಗರದ ಹಿನಕಲ್‌ ರಿಂಗ್‌ ರಸ್ತೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಈತನ ಜೊತೆ ಇದ್ದ ಬೈಕ್‌ ಸವಾರನಿಗೂ ಗಂಭೀರ ಗಾಯಗಳಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಘಟನೆ ನಡೆದ ಬೆನ್ನಿಗೇ ಸಾರ್ವಜನಿಕರು ಪೊಲೀಸರನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರ ವಾಹವನ್ನು ಬ್ಯಾರಿಕೇಡ್‌ನಿಂದ ಹಾನಿಗೊಳಿಸಿ ಪಲ್ಟಿ ಮಾಡಿದ್ದಾರೆ.

ಗರುಡಾ ವಾಹನದ ಚಾಲಕ ಮಂಜುನಾಥ್‌, ವಿವಿಪುರಂ ಸಂಚಾರ ವಿಭಾಗದ ಎಎಸ್‌ಐ ಸ್ವಾಮಿನಾಯಕ್‌  ಅವರಿಗೆ ಜನರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

× Chat with us