ಹುಣಸೂರು: ಮನೆ ಪಕ್ಕದಲ್ಲೇ ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ

ಮೈಸೂರು: ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಗಿಡವನ್ನು ಕಿತ್ತು ಹಾಕಿ ವಶಕ್ಕೆ ಪಡೆದಿರುವ ಜಿಲ್ಲಾ ಪೊಲೀಸರ ತಂಡ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಹುಣಸೂರು ತಾಲ್ಲೂಕಿನ ವಡೆಯರಹೊಸಳ್ಳಿ ಗ್ರಾಮದ ನಿವಾಸಿ ಕುಂಟಸಿಂಗ್ರಯ್ಯ ಎಂಬ ವ್ಯಕ್ತಿಯೇ ಆರೋಪಿ. ಇವರು ತಮ್ಮ ಮನೆಯ ಪಕ್ಕದ ಗಲ್ಲಿಯಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ಕಿತ್ತು ಹಾಕಿರುವ ಪೊಲೀಸರು, 5.8 ಕೆಜಿ ತೂಕದ ಗಾಂಜಾ ಹಸಿ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.