ಪೆಗಾಸಸ್ ಬಗ್ಗೆ ವಿವರ ಪ್ರಮಾಣಪತ್ರ ಸಲ್ಲಿಸುವುದಿಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ

ಹೊಸದಿಲ್ಲಿ: ಪೆಗಾಸಸ್ ಬೇಹುಗಾರಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಿವರವಾದ ಅಫಿಡವಿಟ್ ಸಲ್ಲಿಸಲು ಬಯಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಯಾವ ಸಾಫ್ಟ್‌ವೇರ್ ಬಳಸಲಾಗಿದೆ ಎಂಬುದು ಭಯೋತ್ಪಾದಕ ಸಂಘಟನೆಗಳಿಗೆ ತಿಳಿಯುವುದು ಬೇಡ ಎಂದು ಕೇಂದ್ರ ಹೇಳಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೇಂದ್ರವು ಪೆಗಾಸಸ್ ಸ್ಪೈವೇರ್‌ನನ್ನು ಬಳಸುತ್ತಿದೆಯೇ ಎಂಬ ವಿವರಗಳನ್ನು ತಜ್ಞರ ಸಮಿತಿಯ ಮುಂದೆ ಚರ್ಚಿಸಬಹುದು. ಆದರೆ ಅಫಿಡವಿಟ್‌ನಲ್ಲಿ ಅಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠದ ಮುಂದೆ ತಿಳಿಸಿದ್ದಾರೆ.

ಇದನ್ನು ಎ ಸಾಫ್ಟ್‌ವೇರ್ ಅಥವಾ ಬಿ ಸಾಫ್ಟ್‌ವೇರ್‌ನಿಂದ ಮಾಡಲಾಗಿದೆಯೇ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗುವುದಿಲ್ಲ. ಸರ್ಕಾರದೊಂದಿಗೆ ಸಂಪರ್ಕವಿಲ್ಲದ ತಜ್ಞರು ಇದನ್ನು ನೋಡುತ್ತಾರೆ ಮತ್ತು ನಾವು ಎಲ್ಲರನ್ನೂ ಅವರ ಮುಂದೆ ಇಡುತ್ತೇವೆ. ಇದು ರಾಷ್ಟ್ರದ ಹಿತಾಸಕ್ತಿ ಮತ್ತು ಭದ್ರತೆ ಸಂಬಂಧಪಟ್ಟ ವಿಷಯ ಎಂದು ಸಾಲಿಸಿಟರ್ ಜನರಲ್ ಹೇಳಿದರು.

× Chat with us