ಪಾರ್ವತಮ್ಮ ರಾಜ್‌ ಕುಮಾರ್‌ ಸಹೋದರಿ ನಾಗಮ್ಮ ನಿಧನ

ಬೆಂಗಳೂರು : ವರನಟ  ಡಾ. ರಾಜ್‌ ಕುಮಾರ್‌ ರವರ ಪತ್ನಿ ಪಾರ್ವತಮ್ಮ ರಾಜ್‌ ಕುಮಾರ್‌ ರವರ ಸಹೋದರಿ ನಾಗಮ್ಮ (82) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಾಗಮ್ಮ ಬೆಂಗಳೂರಿನ ಬಸವೇಶ್ವರ ನಗರದದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ 6.30 ರಲ್ಲಿ ನಿಧನರಾಗಿದ್ದಾರೆ.  ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದು, ನಾಳೆ ಚಾಮರಾಜನಗರದ ಯಳಂದೂರು ತಾಲ್ಲೂಕ್ಕಿನ ಕೆಸ್ತೂರಿನಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಲಿದೆ.