ಕೊಳ್ಳೇಗಾಲ: ಕಾರು-ಬೈಕ್‌ ನಡುವೆ ಡಿಕ್ಕಿ, ಬೈಕ್‌ ಸವಾರ ಸಾವು

ಕೊಳ್ಳೇಗಾಲ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕುಂತೂರು ಗ್ರಾಮದ ಬಳಿ ಮಂಗಳವಾರ ಮಂಗಳವಾರ ರಾತ್ರಿ ಜರುಗಿದೆ.

ಪಟ್ಟಣದ ಸಾಮಂದಿಗೇರಿ ಬಡಾವಣೆಯ ನಿವಾಸಿ, ಬ್ಯಾಟರಿ ಷಾಪ್ ಕೆಲಸಗಾರ ಜಮೀಲ್ (35) ಮೃತ್ತ ವ್ಯಕ್ತಿ. ಮತ್ತೋರ್ವ ಬೈಕ್ ಸವಾರ ಅಫ್ಗಾನ್ (21) ತೀವ್ರ ಗಾಯಗೊಂಡಿದ್ದಾನೆ.

ಇವರು ಕೆಲಸದ ನಿಮಿತ್ತ ತಾಲ್ಲೂಕಿನ ಕುಂತೂರು ಕಾರ್ಖಾನೆಯ ಬಳಿಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಮೈಸೂರು ಕಡೆಯಿಂದ ಅತೀವೇಗವಾಗಿ ಬಂದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ರಸ್ತೆ ಮೇಲೆ ಬಿದ್ದಿದಾರೆ.

ತಕ್ಷಣ ಸ್ಥಳೀಯರು ಆಂಬ್ಯುಲೆನ್ಸ್ ಕರೆಯಿಸಿ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಗಾಯಾಳುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಮಾರ್ಗ ಮಧ್ಯ ಬೈಕ್ ಸವಾರನೋರ್ವ ಸಾವನ್ನಪ್ಪಿದ್ದು, ಮತ್ತೋರ್ವ ಸವಾರ ತೀವ್ರ ಗಾಯಗೊಂಡಿದ್ದಾನೆ.

ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಯಿತು. ಮೃತ್ತಪಟ್ಟ ವ್ಯಕ್ತಿಯ ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ. ವಿಚಾರ ತಿಳಿದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಪಘಾತ ಉಂಟಾದ ವಾಹನಗಳನ್ನು ಠಾಣಾ ವಶಕ್ಕೆ ಪಡೆದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us