ಅನ್ನ-ನೀರು ಸೇವಿಸದೆ ಸಮಾಧಿ ಸ್ಥಿತಿಯಲ್ಲಿ ನಿತ್ಯಾನಂದ; ಪೋಟೋ ವೈರಲ್‌!

ರಾಮನಗರ : ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ ಈಗ ಸಮಾಧಿ ಸ್ಥಿತಿ ತಲುಪಿದ್ದು, ನಿರಂತರ ಧ್ಯಾನದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿಯನ್ನೊತ್ತ ಪೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಅಗುತ್ತಿದೆ.

ಹೌದು, ಕೈಲಾಸ ಪೀಠ ಎಂಬ ಹೆಸರಿನ ಫೇಸ್‌ಬುಕ್‌ ಫೇಜಿನಲ್ಲಿ ಈ ಸಂದೇಶ ರವಾನೆಯಾಗಿದ್ದು “ನಾನು ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ಮತ್ತೆ 2026 ರವೇಳೆಗೆ  ಲೌಖಿಕ ಜಗತ್ತಿನ ಚಟುವಟಿಕೆಗಳಿಗೆ ಹಿಂತಿರುಗುತ್ತೇನೆ” ಎಂಬ ನಿತ್ಯಾನಂದರ ಸಂದೇಶಗಳನ್ನು ಬರೆಯಲಾಗಿದೆ. ಸಂದೇಶ್‌ ಜೊತೆಗೆ ನಿತ್ಯಾನಂದರ ಕೈಬರಹವಿರುವ ಪೋಟೋವನ್ನು ಹಾಕಲಾಗಿದೆ.

ಇದಕ್ಕೆ ಸ್ವತಃ ನಿತ್ಯಾನಂದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ” ನಾನು ಈಗಾಗಲೇ ಸತ್ತು ಹೋಗಿದ್ದೇನೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ, ಇದೆಲ್ಲ ಸುಳ್ಳು, 27 ವೈದ್ಯರಿರು ತಂಡ ನನ್ನನ್ನು ನೋಡಿಕೊಳ್ಳುತ್ತಿದೆ.  ಸದ್ಯ ನಾನು ಸಮಾಧಿ ಸ್ಥಿತಿಯಲ್ಲಿದ್ದರೂ ಪ್ರತಿ ದಿನ ಶಿವ ಪೂಜೆ ಮಾಡುತ್ತೇನೆ ಆದರೆ, ಅನ್ನ- ನೀರು ಸ್ವೀಕರಿಸುತ್ತಿಲ್ಲ” ಎಂದು ಹೇಳಿದ್ದಾರೆ.