ಕೋವಿಡ್‌ ರಿಪೋರ್ಟ್‌ ತಪ್ಪಾಯ್ತು… ವಧು-ವರರಿಗೆ ಮಧುಚಂದ್ರ ಮಿಸ್ಸಾಯ್ತು!

ಕೊಡಗು: ಕೋವಿಡ್‌ ಪರೀಕ್ಷೆ ವರದಿ ತಪ್ಪಾಗಿ ಬಂದಿದ್ದರಿಂದ ವಧು-ವರರು ತಮ್ಮ ಮೊದಲ ರಾತ್ರಿಯನ್ನು ಪ್ರತ್ಯೇಕವಾಗಿ ಕಳೆದ ಘಟನೆ ನಡೆಯಿತು. ಮಡಿಕೇರಿ ಜಿಲ್ಲಾ ಆಸ್ಪತ್ರೆ ಅವಾಂತರಕ್ಕೆ ಎರಡೂ ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ.

ಸುಂಟಿಕೊಪ್ಪ ಸಮೀಪದ ಕೆದಕಲ್​ನ ಸಿಮ್ನಾ ಹಾಗೂ ಕೇರಳದ ಕಣ್ಣೂರಿನ ಅನೀಷ್ ವಧು-ವರರು ಏ.25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಮುನ್ನ ಕೋವಿಡ್‌ ಮಾರ್ಗಸೂಚಿಯನ್ವಯ ಇಬ್ಬರೂ ಕೋವಿಡ್‌ ಪರೀಕ್ಷೆ ಮಾಡಿಸಿದ್ದರು. ಮದುವೆ ಮುಗಿಸಿ ಮದುಮಗಳು ತನ್ನ ಗಂಡನ ಮನೆಗೆ ತೆರಳಿದ್ದಾಳೆ. ಈ ವೇಳೆ ಆಕೆಯ ಮೊಬೈಲ್‌ಗೆ ಕೋವಿಡ್‌ ವರದಿ ಪಾಸಿಟಿವ್‌ ಎಂದು ಬಂದಿದೆ.

ಇದರಿಂದ ಆತಂಕಗೊಂಡು ಕುಟುಂಬದವರು ಮದುಮಗಳನ್ನು ಪ್ರತ್ಯೇಕ ಕೋಣೆಯೊಂದರಲ್ಲಿ ಇರಿಸಿದ್ದಾರೆ. ಮತ್ತೆ ಮಾರನೇ ದಿನ ಆಕೆಗೆ ಕೇರಳದಲ್ಲೇ ಕೋವಿಡ್‌ ಪರೀಕ್ಷೆ ಮಾಡಿಸಿದಾಗ ವರದಿ ನೆಗೆಟಿವ್‌ ಬಂದಿದೆ. ನಂತರ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ವಿಚಾರವನ್ನು ಮಡಿಕೇರಿ ಆಸ್ಪತ್ರೆಯವರ ಗಮನಕ್ಕೆ ತಂದಾಗ, ಸಿಬ್ಬಂದಿ ಸಮಜಾಯಿಸಿ ಕೊಟ್ಟು ಸುಮ್ಮನಾಗಿದ್ದಾರೆ.

ಆಸ್ಪತ್ರೆಯ ತಪ್ಪಾದ ವರದಿಯಿಂದ ನವಜೋಡಿ ಮಧುಚಂದ್ರದ ದಿನವನ್ನು ಪ್ರತ್ಯೇಕವಾಗಿ ಕಳೆಯುವಂತಾಯಿತು.

× Chat with us