ಒಟಿಟಿ‌, ಸೋಷಿಯಲ್‌ ಮೀಡಿಯಾಗೆ ಹೊಸ ನಿಯಮಗಳು: ಕೇಂದ್ರದಿಂದ ಮಾರ್ಗಸೂಚಿ

ಹೊಸದಿಲ್ಲಿ: ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ʻಮಾಧ್ಯಮಗಳ ಸ್ವಾತಂತ್ರ್ಯ, ಕಲಾವಿದರ ಸೃಜನಶೀಲತೆಗೆ ಕಡಿವಾಣ ಹಾಕುವ ಉದ್ದೇಶ ನಮಗಿಲ್ಲ. ಆದರೆ, ಜವಾಬ್ದಾರಿಯಿಂದ ಎಲ್ಲರೂ ಸ್ವಾತಂತ್ರ್ಯ ಬಳಸಿಕೊಳ್ಳಬೇಕುʼ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್‌ ಜಾವಡೇಕರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಒಟಿಟಿ ವೇದಿಕೆಗಳನ್ನು ನ್ಯಾಯದಾನ ಪ್ರಕ್ರಿಯೆ ವ್ಯಾಪ್ತಿಯೊಳಗೆ ತರುವುದು, ಮಾಧ್ಯಮ ಯಾವುದೇ ಆದರೂ ಅದಕ್ಕೆ ಮಾರ್ಗದರ್ಶಿ ಸೂತ್ರಗಳಿರಬೇಕು ಎಂದರು.

ಒಟಿಟಿ ಮತ್ತು ಡಿಜಿಟಲ್‌ ಮಾಧ್ಯಮಗಳು ತಮ್ಮ ಬಗೆಗಿನ ಮಾಹಿತಿ ಘೋಷಿಸಿಕೊಳ್ಳಬೇಕು. ಇದಕ್ಕೆ ನೋಂದಣಿ ಬೇಕಿಲ್ಲ. ದೂರು ಪರಿಹಾರ ವ್ಯವಸ್ಥೆ ಮಾಡಿಕೊಳ್ಳುವುದು. ಸ್ವಯಂ ನಿಯಂತ್ರಣ ವ್ಯವಸ್ಥೆ ಮಾಡಿಕೊಳ್ಳಬೇಕು. ಇದನ್ನು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನ್ಯಾಯಧೀಶರು ರೂಪಿಸಬೇಕು. ಸೆನ್ಸಾರ್‌ ಮಂಡಳಿ ಸೂತ್ರಗಳಿಗೂ ಒಟಿಟಿ ಅನ್ವಯಿಸುತ್ತದೆ. ಡಿಜಿಟಲ್‌ ಮಾಧ್ಯಮಗಳು ತಪ್ಪು, ಸುಳ್ಳು ಹರಡುವಂತಿಲ್ಲ.