ಚೆನ್ನೈ-ಕರ್ನಾಟಕದಲ್ಲಿ ಐಪಿಎಸ್ ಅಕಾರಿಯಾಗಿ ಸೇವೆ ಸಲ್ಲಿಸಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಝಡ್ ಕ್ಯಾಟಗರಿ ಭದ್ರತೆಯನ್ನು ಒದಗಿಸಿದೆ.
ಇನ್ನು ಮುಂದೆ ಅಣ್ಣಾಮಲೈಗೆ 33 ಮಂದಿ ಕಮಾಂಡೋಗಳು ಹಾಗೂ ಸ್ಥಳೀಯ ಪೆÇಲೀಸರು ಭದ್ರತೆಯನ್ನು ಒದಗಿಸಲಿದ್ದಾರೆ.
ಈ ಮೊದಲು ಅಣ್ಣಾಮಲೈಗೆ ಕೇಂದ್ರ ಸರ್ಕಾರ ವೈ ಕೆಟಗರಿ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ಅವರಿಗೆ ಪದೇ ಪದೇ ಕೆಲವು ಧಾರ್ಮಿಕ ಮೂಲಭೂತವಾದಿಗಳು ಹಾಗೂ ನಕ್ಸಲ್ ಸಂಘಟನೆಯಿಂದ ಪ್ರಾಣಬೆದರಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಝೆಡ್ ಕೆಟಗರಿ ಭದ್ರತೆಯನ್ನು ನೀಡಿದೆ.
ಕೆಲವೇ ಕೆಲವು ಗಣ್ಯ ವ್ಯಕ್ತಿಗಳಿಗೆ ಮಾತ್ರ ಗರಿಷ್ಠ ಮಟ್ಟದ ಭದ್ರತೆಯನ್ನು ಒದಗಿಸಲಾಗುತ್ತದೆ. ಕೇಂದ್ರ ಸಚಿವರು ಹಾಗೂ ಭಯೋತ್ಪಾದಕರು, ನಕ್ಸಲೀಯರು ಮತ್ತು ಧಾರ್ಮಿಕ ಮೂಲಭೂತವಾದಿಗಳಿಂದ ಪ್ರಾಣ ಬೆದರಿಕೆ ಇರುವವರಿಗೆ ಮಾತ್ರ ಗೃಹ ಇಲಾಖೆ ಈ ಭದ್ರತೆಯನ್ನು ನೀಡುತ್ತದೆ.
ಕೇಂದ್ರ ಗುಪ್ತಚರ ವಿಭಾಗ ನೀಡುವ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿ ಗೃಹ ಇಲಾಖೆ ಭದ್ರತೆಯನ್ನು ನಿಯೋಜನೆ ಮಾಡುತ್ತದೆ. ಪ್ರಸ್ತುತ ಅಣ್ಣಾಮಲೈಗೆ ಸಿಆರ್ಪಿಎಫ್ನ 33 ಮಂದಿ ಕಮಾಂಡೋಗಳನ್ನು ಭದ್ರತೆಗೆ ಒದಗಿಸಲಾಗುತ್ತದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಮೂಲತಃ ತಮಿಳುನಾಡಿನ ಅಣ್ಣಾಮಲೈ ಕರ್ನಾಟಕ ಕೇಡರ್ನ ಐಪಿಎಸ್ ಅಕಾರಿಯಾಗಿ ಸೇವೆ ಸಲ್ಲಿಸಿದ್ದರು. ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ದಕ್ಷ ಅಕಾರಿ ಎಂದೇ ಅವರು ಗುರುತಿಸಿಕೊಂಡಿದ್ದರು.
ತಮ್ಮ ಸೇವಾ ಅವಯಲ್ಲಿ ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಲ್ಲದೇ ಸಮಾಜ ಘಾತುಕರು ಹಾಗೂ ರೌಡಿಗಳಿಗೆ ಸಿಂಹ ಸ್ವಪ್ನವಾಗಿದ್ದರು. ಹೀಗಾಗಿಯೇ ಅವರನ್ನು ಸಿಂಗಮ್ ಎಂದೇ ಕರೆಯಲಾಗುತ್ತಿತ್ತು.
ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ತಮಿಳುನಾಡಿನ ಕರೂರು ಜಿಲ್ಲೆಯ ಅರವಕುರುಚಿ ವಿಧಾನಸಭಾ ಕ್ಷೇತ್ರದಿಂದ ಸ್ರ್ಪಸಿ ಡಿಎಂಕೆ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.