ದೆಹಲಿಯಲ್ಲಿ ಏರಿಕೆಯಾಗುತ್ತಿರುವ ಕೊವಿಡ್​ 19; ಹಳದಿ ಅಲರ್ಟ್ ಘೋಷಣೆ, ಶಾಲೆ-ಕಾಲೇಜು ಬಂದ್​

ನವದೆಹಲಿ: ದೆಹಲಿಯಲ್ಲಿ ಕೊವಿಡ್​ 19 ಮತ್ತು ಒಮಿಕ್ರಾನ್ ವೈರಾಣುಗಳ ಸೋಂಕಿತರ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ, ನಗರದಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯಲ್ಲಿ ಹಳದಿ ಅಲರ್ಟ್​ ಘೋಷಣೆ ಮಾಡಲಾಗಿದೆ.

ಬುಧವಾರದಿಂದ ಈ ಹಳದಿ ಅಲರ್ಟ್​ ಘೋಷಣೆಯಾಗಲಿದ್ದು, ಶಾಲೆ, ಕಾಲೇಜುಗಳು, ಜಿಲ್​, ಸ್ಪಾಗಳು ಬಂದ್ ಆಗಲಿವೆ. ಹಾಗೇ, ಮೆಟ್ರೋ, ಬಸ್​ಗಳೆಲ್ಲ ಶೇ.50ರಷ್ಟು ಸಾಮರ್ಥ್ಯದಲ್ಲಿ ಸಂಚರಿಸಲಿವೆ. ದೆಹಲಿಯಲ್ಲಿ 24 ಗಂಟೆಯಲ್ಲಿ 331 ಹೊಸ ಕೊರೊನಾ ಕೇಸ್​ಗಳು ದಾಖಲಾಗಿವೆ. ಹೀಗಾಗಿ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿದೆ.

 

× Chat with us