ಶೌಚ ತಡೆಯಲು ರಾತ್ರಿ ಊಟವನ್ನೇ ಬಿಟ್ಟ ಮಹಿಳೆಯರು… ಯೋಗಿ ರಾಜ್ಯದ ದುಸ್ಥಿತಿ

ಹರ್ದೊಯ್: ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ದೇಶದ ಮೂಲೆ ಮೂಲೆಗಳಲ್ಲೂ ಶೌಚಾಲಯ ಕಟ್ಟಬೇಕೆಂದು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಅದನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂಬ ಪ್ರಚಾರ ಕೂಡ ಮಾಡಲಾಗುತ್ತಿದೆ.

ಆದರೆ ಇಲ್ಲೊಂದು ಹಳ್ಳಿಯಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲದ ಕಾರಣ ಬಹುತೇಕ ಜನರು ಬಯಲು ಶೌಚವನ್ನು ಅವಲಂಬಿಸಿದ್ದಾರೆ. ಇಲ್ಲಿನ ಹೆಣ್ಣುಮಕ್ಕಳು ಬೆಳಗ್ಗೆ ಬಯಲಲ್ಲಿ ಶೌಚಕ್ಕೆ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ರಾತ್ರಿ ಊಟವನ್ನೇ ಬಿಟ್ಟಿದ್ದಾರಂತೆ.

ಹೀಗೊಂದು ಕರಳು ಹಿಂಡುವಂತಹ ಸುದ್ದಿಯನ್ನು ಪ್ರತಿಷ್ಠಿತ ಇಂಗ್ಲಿಷ್‌ ಪತ್ರಿಕೆಗಳು ವರದಿಮಾಡಿವೆ.

ಅಂದಹಾಗೆ ಉತ್ತರ ಪ್ರದೇಶದ ಹರ್ದೊಯ್‌ ಜಿಲ್ಲೆಯ ಪ್ರಣಬಹರ್‌ ಗ್ರಾಮಸಭೆಯ ಮೂರು ಊರುಗಳಲ್ಲಿ ಮಹಿಳೆಯರು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಪದ್ಧತಿಯನ್ನು ಅನುಸರಿಸುತ್ತಾ ಬಂದಿದ್ದಾರಂತೆ.

ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಊರಿನವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ರಾತ್ರಿ ಊಟವನ್ನೇ ತ್ಯಜಿಸಿದ್ದಾರೆ.

× Chat with us